ದರ್ಶನ್ ಮನೆ ಮೇಲೆ ನಡೆದಿದ್ದು ಐಟಿ ದಾಳಿ ಅಲ್ಲ...!

By Web DeskFirst Published Apr 15, 2019, 2:10 PM IST
Highlights

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮೇಲೆ ನಡೆದಿದ್ದು ಐಟಿ ದಾಳಿ ಅಲ್ಲ| ಟಿ. ನರಸೀಪುರದಲ್ಲಿರುವ ದರ್ಶನ್ ಫಾರ್ಮ್ಹೌಸ್ನಲ್ಲಿ ಶೋಧ ನಡೆದಿಲ್ಲ| ಫಾರ್ಮ್ಹೌಸ್ನಲ್ಲಿ ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ದರ್ಶನ್ ಸ್ಪಷ್ಟನೆ

ಮಂಡ್ಯ[ಏ.15]: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಭಾರೀ ಬೆಳವಣಿಗೆಗಳಾಗುತ್ತಿವೆ. ಇವೆಲ್ಲದರ ನಡುವೆ ಮಂಡ್ಯ ಲೋಕಸಭಾ ಕ್ಷೇತ್ರ ಹೈವೋಲ್ಟೇಜ್ ಕಣವಾಗಿ ಮಾರ್ಪಾಡಾಗಿದೆ. ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ವಿರುದ್ಧ ಸುಮಲತಾ ಕಣಕ್ಕಿಳಿದಿದ್ದೇ ಎಲ್ಲರ ಚಿತ್ತ ಮಂಡ್ಯದತ್ತ ಹೊರಳುವಂತೆ ಮಾಡಿದೆ.ಈ ಕಾದಾಟದಲ್ಲಿ ದರ್ಶನ್ ಹಾಗೂ ಯಶ್ ಜೋಡೆತ್ತುಗಳಂತೆ ಸುಮಲತಾ ಬೆಂಬಲಕ್ಕೆ ನಿಂತಿದ್ದಾರೆ. ಹೀಗಿರುವಾಗ ನಟ ದರ್ಶನ್ ಮೇಲೆ ಐಟಿ ದಾಳಿ ನಡೆದಿದೆ ಎನ್ನುವ ಸುದ್ದಿ ವರದಿಯಾಗಿತ್ತು. ಆದರೆ ಈ ವಿಚಾರಕ್ಕೆ ಖುದ್ದು ದರ್ಶನ್ ಸ್ಪಷ್ಟನೆ ನೀಡುತ್ತಾ ಇದು ಐಟಿ ದಾಳಿಯಲ್ಲ ಎಂದಿದ್ದಾರೆ

ಹೌದು ಇಂದು ಸೋಮವಾರ ಮೈಸೂರಿನ ಟಿ. ನರಸೀಪುರದಲ್ಲಿರುವ ನಟ ದರ್ಶನ್ ರವರ 'ತೂಗುದೀಪ' ಫಾರ್ಮ್ ಹೌಸ್ ಮೇಲೆ ಐಟಿ ದಾಳಿ  ನಡೆದಿದೆ ಎನ್ನಲಾಗಿತ್ತು. ಈ ಕುರಿತಾಗಿ ಪ್ರತಿಕ್ರಿಯಿಸಿರುವ ನಟ ದರ್ಶನ್ 'ಫಾರ್ಮ್ಹೌಸ್ ಮೇಲೆ ನಡೆದಿದ್ದು ಐಟಿ ದಾಳಿ ಅಲ್ಲ, ಚುನಾವಣಾಧಿಕಾರಿಗಳು ಫಾರ್ಮ್ಹೌಸ್ನಲ್ಲಿ ಪರಿಶೀಲನೆ ನಡೆಸಿದ್ದಾರೆ. ಫಾರ್ಮ್ಹೌಸ್ ಬಗ್ಗೆ ಅಧಿಕಾರಿಗಳಿಗೆ ಎಲ್ಲ ಮಾಹಿತಿ ಕೊಟ್ಟಿದ್ದೀವಿ. ಅಲ್ಲಿ ಇಂಡಿ ಇದೆ, ಪ್ರಾಣಿಗಳಿವೆ, ಪಕ್ಷಿಗಳು ಹಾಗೂ ಕೆಲಸ ಮಾಡುವ ಹುಡುಗರು ಇದ್ದಾರೆ ಅಷ್ಟೇ' ಎಂದಿದ್ದಾರೆ.

ಚುನಾವಣೆ ಹೊಸ್ತಿಲಲ್ಲಿ ರಾಜಕೀಯ ಮುಖಂಡರು, ಅವರ ಆಪ್ತರ ಮೇಲೆ ಐಟಿ ದಾಳಿಗಾಗಿದ್ದವು. ಹೀಗಿರುವಾಗ ದರ್ಶನ್ ಮನೆಗೆ ಚುನಾವಣಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿರುವುದು ಭಾರೀ ಕುತೂಹಲ ಮೂಡಿಸಿದೆ.

click me!