ಇದು 2ನೇ ಹಂತದ ಮತಸಾಗರ: ಭಾರತ ಪ್ರಜಾಪ್ರಭುತ್ವದ ಆಗರ!

By Web DeskFirst Published Apr 18, 2019, 12:43 PM IST
Highlights

ಎರಡನೇ ಹಂತದ ಮತದಾನ ಪ್ರಕ್ರಿಯೆಲ್ಲಿ ಭಾರತ ಬ್ಯುಸಿ| ಕರ್ನಾಟಕ ಸೇರಿದಂತೆ ದೇಶದ 11 ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾನ| ಒಟ್ಟು 95 ಲೋಕಸಭಾ ಕ್ಷೇತ್ರಗಳಿಗೆ ಮತದಾನ| ಕಣದಲ್ಲಿದ್ದಾರೆ ಹಲವು ಪ್ರಮುಖ ಅಭ್ಯರ್ಥಿಗಳು| ಹಲವು ರಾಜ್ಯಗಳಲ್ಲಿ ಇವಿಎಂ ಮತಯ್ರಂತದಲ್ಲಿ ದೋಷ| ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುತ್ತಿರುವ ಮತದಾರರು|

ನವದೆಹಲಿ(ಏ.18): 2019 ರ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಪ್ರಕ್ರಿಯೆ ಇಂದು ಆರಂಭವಾಗಿದ್ದು, ಕರ್ನಾಟಕವೂ ಸೇರಿದಂತೆ ದೇಶದ 11 ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಒಟ್ಟು 95 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ.

Chennai: DMK President MK Stalin casts his vote at polling booth at SIET College in Teynampet. pic.twitter.com/AQRyKDQLCr

— ANI (@ANI)

ರಾಜ್ಯಗಳು, ಕೇಂದ್ರಾಡಳಿತ ಪ್ರದೇಶ ಮತ್ತು ಲೋಕಸಭಾ ಕ್ಷೇತ್ರಗಳ ಸಂಖ್ಯೆ:
2ನೇ ಹಂತದ ಮತದಾನದಲ್ಲಿ ಅಸ್ಸಾಂ(05), ಬಿಹಾರ(05),  ಛತ್ತೀಸ್​ಘಡ್(03), ಜಮ್ಮು-ಕಾಶ್ಮೀರ(02), ಕರ್ನಾಟಕ(14), ಮಹಾರಾಷ್ಟ್ರ(10), ಮಣಿಪುರ್(01), ಓದಿಶಾ(05), ತಮಿಳುನಾಡು(39), ತ್ರಿಪುರ(01), ಉತ್ತರಪ್ರದೇಶ(08), ಪಶ್ಚಿಮ ಬಂಗಾಳ(03), ಕೇಂದ್ರಾಡಳಿತ ಪ್ರದೇಶ ಪುದುಚೇರಿ(01) ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.

Tamil Nadu: Amma Makkal Munnetra Kazhagam (AMMK) chief TTV Dinakaran cast his vote at a polling station in Besant Nagar in Chennai South parliamentary constituency. pic.twitter.com/s7PMSsg00r

— ANI (@ANI)

ಒಟ್ಟು ಅಭ್ಯರ್ಥಿಗಳ ಸಂಖ್ಯೆ:
97 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 1,644 ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಇವರಲ್ಲಿ ರಾಷ್ಟ್ರೀಯ ಪಕ್ಷ(209), ಪ್ರಾದೇಶಿಕ ಪಕ್ಷ(107) ಮತ್ತು ಸ್ವತಂತ್ರ್ಯ(888) ಅಭ್ಯರ್ಥಿಗಳಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. 

Agra: UP Congress chief Raj Babbar and party's candidate from Fatehpur Sikri casts his vote at the polling booth in Radha Ballabh Inter College, for pic.twitter.com/l1rLK9F88C

— ANI UP (@ANINewsUP)


ಪ್ರಮುಖ ಅಭ್ಯರ್ಥಿಗಳು:
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ: (ಕರ್ನಾಟಕ-ತುಮಕೂರು)
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಜುಹಾಲ್:(ಉದ್ದಾಮ್ ಪುರ್)
ಜುಹಾಲ್ ಒರಮ್(ಸುಂದರ್ ಪುರ್-ಒಡೀಶಾ)
ದಯಾನಿಧಿ ಮಾರನ್(ತಮಿಳುನಾಡು)
ಎ. ರಾಜಾ(ತಮಿಳುನಾಡು)
ಕನಿಮೋಳಿ(ತಮಿಳುನಾಡು)
ಹೇಮಾ ಮಾಲಿನಿ(ಮಥುರಾ-ಉತ್ತರಪ್ರದೇಶ)

:Polling percentage recorded in Assam (5 seats)-9.51%,J&K (2 seats)-0.99%,Karnataka (14 seats)1.14%, Maha(10)-0.85%,Manipur(1)-1.78%,Odisha(5)-2.15%, TN(38)-0.81%, Tripura(1)-0.00%, UP(8)-3.99%, WB(3)-0.55%, Chhattisgarh(3)-7.75% & Puducherry-1.62%,till 9am pic.twitter.com/3pRbUFjdl4

— ANI (@ANI)

ಈ ಮಧ್ಯೆ ಹಲವು ರಾಜ್ಯಗಳಲ್ಲಿ ಇವಿಎಂ ಮತಯಂತ್ರದಲ್ಲಿ ದೋಷ ಕಂಡುಬಂದ ಕುರಿತು ವರದಿಗಳು ಬಂದಿವೆ. ಆದರೆ ಬಹುತೇಕ ಕಡೆ ಮತದಾನ ಶಾಂತಿಯುತವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

BJP MP Candidate from Mathura, Hema Malini says, "Development in Mathura is all due to my efforts. SP-BSP are only engaged in fighting with each other. There is a huge Modi wave here." pic.twitter.com/6Xm5dWWz2u

— ANI UP (@ANINewsUP)

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28. 

Farooq Abdullah & Omar Abdullah cast their votes at a polling station in Munshi Bagh Area in Srinagar LS constituency. O Abdullah says, "Now that LS polls are due to conclude, we can only hope that Centre together with EC gives people of J&K an elected govt which is their right." pic.twitter.com/BkoMsBe9JE

— ANI (@ANI)

 

click me!