ಭಾರತದಲ್ಲಿ 2293 ರಾಜಕೀಯ ಪಕ್ಷಗಳು!: ಜನವರಿ ಬಳಿಕ 149 ಪಕ್ಷಗಳು ರಿಜಿಸ್ಟರ್!

Published : Mar 18, 2019, 01:10 PM IST
ಭಾರತದಲ್ಲಿ 2293 ರಾಜಕೀಯ ಪಕ್ಷಗಳು!: ಜನವರಿ ಬಳಿಕ 149 ಪಕ್ಷಗಳು ರಿಜಿಸ್ಟರ್!

ಸಾರಾಂಶ

ಭಾರತದಲ್ಲಿವೆ 2293 ರಾಜಕೀಯ ಪಕ್ಷಗಳು!| ಜನವರಿಯಿಂದ ಮಾರ್ಚ್ ವರೆಗೆ 149 ಹೊಸ ರಾಜಕೀಯ ಪಕ್ಷಗಳು ನೋಂದಣಿ

ನವದೆಹಲಿ[ಮಾ.18]: ಚುನಾವಣೆ ಸಮೀಪಿಸುತ್ತಿದ್ದಂತೆ ದಿನಕ್ಕೊಂದು ರಾಜಕೀಯ ಪಕ್ಷಗಳು ಹುಟ್ಟಿಕೊಳ್ಳುವ ನಮ್ಮ ದೇಶದಲ್ಲಿ ಸದ್ಯ ಒಟ್ಟಾರೆ 2293 ರಾಜಕೀಯ ಪಕ್ಷಗಳಿವೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಅದರಲ್ಲೂ, ಈ ವರ್ಷದ ಜನವರಿಯಿಂದ ಮಾಚ್‌ರ್‍ವರೆಗೆ 149 ಹೊಸ ರಾಜಕೀಯ ಪಕ್ಷಗಳು ನೋಂದಣಿ ಮಾಡಿಕೊಂಡಿವೆ.

ಚುನಾವಣಾ ಆಯೋಗವು 2019ರ ಲೋಕಸಭೆ ಚುನಾವಣೆಗಾಗಿ ದೇಶದಲ್ಲಿರುವ ರಾಜಕೀಯ ಪಕ್ಷಗಳ ಬಗೆಗಿನ ದತ್ತಾಂಶಗಳನ್ನು ಅಪ್‌ಡೇಟ್‌ ಮಾಡಿದೆ. ಅದರಲ್ಲಿ, ದೇಶದಲ್ಲಿ ಒಟ್ಟು 2293 ರಾಜಕೀಯ ಪಕ್ಷಗಳಿರುವುದು, ಕಳೆದ ಮೂರು ತಿಂಗಳಲ್ಲಿ 149 ರಾಜಕೀಯ ಪಕ್ಷಗಳು ಹೊಸತಾಗಿ ನೋಂದಣಿ ಮಾಡಿಸಿಕೊಂಡಿರುವುದು, ದೇಶದಲ್ಲಿ ಒಟ್ಟು ಏಳು ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷಗಳಿರುವುದು ಹಾಗೂ 59 ಮಾನ್ಯತೆ ಪಡೆದ ರಾಜ್ಯಮಟ್ಟದ ಪಕ್ಷಗಳಿರುವುದು ತಿಳಿದುಬಂದಿದೆ.

ಇತ್ತೀಚೆಗೆ ಹೊಸತಾಗಿ ನೋಂದಾಯಿತವಾಗಿರುವ ರಾಜಕೀಯ ಪಕ್ಷಗಳಲ್ಲಿ ಬಹುಜನ್‌ ಆಜಾದ್‌ ಪಾರ್ಟಿ, ಸಾಮೂಹಿಕ್‌ ಏಕ್ತಾ ಪಾರ್ಟಿ, ರಾಷ್ಟ್ರೀಯ ಸಾಫ್‌ ನೀತಿ ಪಾರ್ಟಿ, ಸಬ್ಸಿ ಬಡಿ ಪಾರ್ಟಿ, ಭರೋಸಾ ಪಾರ್ಟಿ, ನ್ಯೂ ಜನರೇಷನ್‌ ಪೀಪಲ್ಸ್‌ ಪಾರ್ಟಿ ಮುಂತಾದ ಹೆಸರಿನ ಪಕ್ಷಗಳು ಸೇರಿವೆ. ನೋಂದಣಿ ಮಾಡಿಸಿಕೊಂಡ, ಆದರೆ ಮಾನ್ಯತೆ ಪಡೆದಿಲ್ಲದ ಪಕ್ಷಗಳಿಗೆ ಅವುಗಳದೇ ಚಿಹ್ನೆ ಲಭಿಸುವುದಿಲ್ಲ. ಚುನಾವಣಾ ಆಯೋಗದ ಬಳಿಯಿರುವ 84 ಚಿಹ್ನೆಗಳ ಪೈಕಿ ಯಾವುದಾದರೂ ಒಂದನ್ನು ಅವು ಆಯ್ಕೆ ಮಾಡಿಕೊಳ್ಳಬೇಕು.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!