ರಾಜ್ಯದಲ್ಲಿ ಪ್ರಿಯಾಂಕಾ ಗಾಂಧಿ ಸೇರಿ 40 ಮಂದಿ ಸ್ಟಾರ್‌ ಪ್ರಚಾರಕರು: ಇಲ್ಲಿದೆ ಪಟ್ಟಿ!

Published : Mar 30, 2019, 08:21 AM IST
ರಾಜ್ಯದಲ್ಲಿ ಪ್ರಿಯಾಂಕಾ ಗಾಂಧಿ ಸೇರಿ 40 ಮಂದಿ ಸ್ಟಾರ್‌ ಪ್ರಚಾರಕರು: ಇಲ್ಲಿದೆ ಪಟ್ಟಿ!

ಸಾರಾಂಶ

ರಾಜ್ಯದಲ್ಲಿ ಪ್ರಿಯಾಂಕಾ ಗಾಂಧಿ ಸ್ಟಾರ್‌ ಪ್ರಚಾರಕಿ| ಕಾಂಗ್ರೆಸ್‌ಗೆ ಸೋನಿಯಾ, ರಾಹುಲ್‌ ಸೇರಿ 40 ಸ್ಟಾರ್‌ ಪ್ರಚಾರಕರು

ಬೆಂಗಳೂರು[ಮಾ.30]: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಪರ ಸ್ಟಾರ್‌ ಪ್ರಚಾರಕರಾಗಿ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ಪ್ರಿಯಾಂಕ ಗಾಂಧಿ, ಖ್ಯಾತ ನಟಿ ಖುಷ್ಬೂ ಸುಂದರ್‌ ಸೇರಿದಂತೆ 40 ಮಂದಿಯ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಲೋಕಸಭೆ ಚುನಾವಣೆವರೆಗೆ ರಾಜ್ಯದ ಕಾಂಗ್ರೆಸ್‌ ಅಭ್ಯರ್ಥಿಗಳ ಪ್ರಚಾರ ಮಾಡಲಿರುವ ಸ್ಟಾರ್‌ ಪ್ರಚಾರಕರ ಪಟ್ಟಿಈ ರೀತಿ ಇದೆ.

ಮಾಜಿ ಪ್ರಧಾನಮಂತ್ರಿ ಡಾ| ಮನಮೋಹನ್‌ ಸಿಂಗ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ| ಜಿ.ಪರಮೇಶ್ವರ್‌, ಲೋಕಸಭೆ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ಡಿ.ಕೆ.ಶಿವಕುಮಾರ್‌, ಎಚ್‌.ಕೆ.ಪಾಟೀಲ್‌, ರಾಮಲಿಂಗಾರೆಡ್ಡಿ, ಡಾ| ಜಯಮಾಲಾ, ಉಮಾಶ್ರೀ, ಸಿ.ಎಂ.ಇಬ್ರಾಹಿಂ, ಗುಲಾಮ್‌ ನಬಿ ಆಜಾದ್‌, ಪೃಥ್ವಿರಾಜ್‌ ಚವಾಣ್‌, ಸಚಿನ್‌ ಪೈಲಟ್‌, ಸಲೀಮ್‌ ಅಹಮದ್‌, ಆರ್‌.ವಿ. ದೇಶಪಾಂಡೆ, ಎಂ.ಬಿ. ಪಾಟೀಲ್‌, ಕೆ.ಜೆ. ಜಾಜ್‌ರ್‍, ಸತೀಶ್‌ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಜಮೀರ್‌ ಅಹ್ಮದ್‌ ಖಾನ್‌, ಆರ್‌.ಬಿ.ತಿಮ್ಮಾಪುರ್‌, ಪಿ.ಟಿ. ಪರಮೇಶ್ವರ ನಾಯ್ಕ, ಕೆ. ರೆಹಮಾನ್‌ ಖಾನ್‌, ಕೆ.ಎಚ್‌. ಮುನಿಯಪ್ಪ, ಡಾ. ಶರಣಪ್ರಕಾಶ್‌ ಪಾಟೀಲ್‌, ಎಚ್‌.ಎಂ. ರೇವಣ್ಣ, ಮೋಟಮ್ಮ, ಮುಖ್ಯಮಂತ್ರಿ ಚಂದ್ರು, ರೋಷನ್‌ ಬೇಗ್‌, ಡಾ| ಎಚ್‌.ಸಿ. ಮಹದೇವಪ್ಪ, ಡಾ| ಎಲ್‌. ಹನುಮಂತಯ್ಯ, ವಿ.ಆರ್‌. ಸುದರ್ಶನ್‌ ಮತ್ತು ಐವಾನ್‌ ಡಿಸೋಜಾ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!