ಮತದಾನ ಮಾಡಲು ಒಳಹೋದ ಅಮ್ಮ: ಯೋಧನ ಮಡಿಲಲ್ಲಿ ಕಂದಮ್ಮ!

By Web DeskFirst Published Apr 23, 2019, 8:15 PM IST
Highlights

2019 ರ ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ಪ್ರಕ್ರಿಯೆ ಇಂದು ಮುಕ್ತಾಯವಾಗಿದ್ದು, ಕರ್ನಾಟಕವೂ ಸೇರಿದಂತೆ ದೇಶದ 13 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 116 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಮುಗಿದಿದೆ.

ನವದೆಹಲಿ(ಏ.23): 2019 ರ ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ಪ್ರಕ್ರಿಯೆ ಇಂದು ಮುಕ್ತಾಯವಾಗಿದ್ದು, ಕರ್ನಾಟಕವೂ ಸೇರಿದಂತೆ ದೇಶದ 13 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 116 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಮುಗಿದಿದೆ.

ಈ ಮಧ್ಯೆ ಮಹಿಳೆಯೋರ್ವರು ಮತದಾನ ಮಾಡಲು ಮತಗಟ್ಟೆ ಒಳಗೆ ಹೋದಾಗ, ಮತಗಟ್ಟೆಯ ಭದ್ರತೆಗೆ ನಿಯೋಜನೆಗೊಂಡಿದ್ದ CRPF ಯೋಧನೋರ್ವ ಆಕೆಯ ಕಂದನನ್ನು ಆರೈಕೆ ಮಾಡಿದ ಫೋಟೋ ಭಾರೀ ವೈರಲ್ ಆಗಿದೆ.

CUTENESS OVERLOAD: Well the EVMs will have to wait before this little kid casts vote. However, the kid is happily observing the process in safe hands.

Kid enjoying the company of CRPF while the mother votes.#DeshKaMahaTyohar pic.twitter.com/UlS5BgrPQd

— 🇮🇳CRPF🇮🇳 (@crpfindia)

ಈ ಕುರಿತು ಟ್ವೀಟ್ ಮಾಡಿರುವ CRPF ಈ ಕಂದ ಸುರಕ್ಷಿತ ಕೈಗಳಲ್ಲಿದೆ ಎಂದು ಹೆಮ್ಮೆಯಿಂದ ಹೇಳಿದೆ. ಇನ್ನು CRPF ಟ್ವೀಟ್ ಭಾರೀ ವೈರಲ್ ಆಗಿದ್ದು, ಯೋಧನ ಮಡಿಲಲ್ಲಿ ಮುಗುಳ್ನುತ್ತಾ ಆಟವಾಡುತ್ತಿದ್ದ ಕಂದನಿಗೆ ಎಲ್ಲರೂ ಪ್ರೀತಿಯ ಸಂದೇಶ ಕಳುಹಿಸಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏ.18ರಂದು ಮುಗಿದಿದ್ದು,ಏ.23ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.
 

click me!