ಮೋದಿ ಕಾಪ್ಟರ್‌ ತಪಾಸಣೆ ಮಾಡಿ ಅಮಾನತಾಗಿದ್ದ ಅಧಿಕಾರಿ ಕರ್ನಾಟಕಕ್ಕೆ ವರ್ಗ

By Web DeskFirst Published Apr 22, 2019, 10:50 AM IST
Highlights

ಲೋಕಸಭಾ ಚುನಾವನೆಯ ಈ ಸಂದರ್ಭದಲ್ಲಿ ಮೋದಿ ಕಾಪ್ಟರ್ ತಪಾಸಣೆ ಮಾಡಿದ್ದ ಅಧಿಕಾರಿಯನ್ನು ಕರ್ನಾಟಕಕ್ಕೆ ವರ್ಗ ಮಾಡಲಾಗಿದೆ. 

ನವದೆಹಲಿ: ಒಡಿಶಾದ ಸಂಬಾಲ್‌ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್‌ ತಪಾಸಣೆ ಮಾಡಿದ ಕಾರಣಕ್ಕೆ ಅಮಾನತುಗೊಂಡಿದ್ದ ಕರ್ನಾಟಕ ಕೇಡರ್‌ನ ಐಎಎಸ್‌ ಅಧಿಕಾರಿ, ಚುನಾವಣಾ ಮೇಲ್ವಿಚಾರಕ ಮೊಹಮ್ಮದ್‌ ಮೊಹ್ಸಿನ್‌ ಅವರನ್ನು ಕರ್ನಾಟಕದ ಬೆಂಗಳೂರಿನ ಮುಖ್ಯ ಚುನಾವಣಾ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.

ವಿಶೇಷ ಭದ್ರತಾ ಗುಂಪಿಗೆ ಸೇರಿದ ವ್ಯಕ್ತಿಗಳ ವಾಹನಗಳನ್ನು ತಪಾಸಣೆ ಮಾಡಬಾರದು ಎಂಬ ನಿಯಮವಿದ್ದರೂ, ಏ.16ರಂದು ನಡೆದ ಸಂಬಾಲ್ಪುರ ರಾರ‍ಯಲಿಯ ವೇಳೆ ಮೋದಿ ಅವರ ಹೆಲಿಕಾಪ್ಟರ್‌ನಲ್ಲಿ ಇದ್ದ ಲಗೇಜ್‌ ಅನ್ನು ಮೊಹ್ಸಿಲ್‌ ಅವರ ನೇತೃತ್ವದ ತಂಡ ತಪಾಸಣೆ ಮಾಡಿತ್ತು.

ಈ ಕಾರಣಕ್ಕಾಗಿ ಕರ್ನಾಟಕ ಕೇಡರ್‌ ಐಎಎಸ್‌ ಅಧಿಕಾರಿ ಆಗಿರುವ ಮೊಹ್ಸಿನ್‌ ಅವರನ್ನು ಚುನಾವಣಾ ಮೇಲ್ವಿಚಾರಕ ಹುದ್ದೆಯಿಂದ ಅಮಾನತುಗೊಳಿಸಲಾಗಿತ್ತು.

click me!