
ನವದೆಹಲಿ[ಮಾ.25]: ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಅರ್ಥಶಾಸ್ತ್ರ ಗೊತ್ತಿಲ್ಲ ಎಂದಿದ್ದ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
‘ನಾನೊಬ್ಬ ಬ್ರಾಹ್ಮಣ. ನಾನು ಚೌಕೀದಾರ ಆಗುವುದಿಲ್ಲ. ನನ್ನ ಬಳಿ ಇರುವ ಚೌಕೀದಾರರಿಗೆ ಸೂಚನೆಗಳನ್ನು ಕೊಡುತ್ತೇನೆ. ಹೀಗಾಗಿಯೇ ಚೌಕೀದಾರ ಅಭಿಯಾನದಲ್ಲಿ ಭಾಗಿಯಾಗಿಲ್ಲ’ ಎಂದು ಅವರು ಸುದ್ದಿವಾಹಿನಿಯೊಂದಕ್ಕೆ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಅವರ ಹೇಳಿಕೆಯ ವಿಡಿಯೋ ವೈರಲ್ ಆಗಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಅವರು ‘ಮೇ ಭೀ ಚೌಕೀದಾರ್’ ಅಭಿಯಾನ ಆರಂಭಿಸಿ, ಟ್ವೀಟರ್‌ನಲ್ಲಿ ತಮ್ಮ ಹೆಸರಿನ ಮುಂದೆ ‘ಚೌಕೀದಾರ್’ ಎಂದು ಸೇರಿಸಿಕೊಂಡಿದ್ದಾರೆ. ಹಲವು ಸಚಿವರು ಅದನ್ನೇ ಅನುಸರಿಸಿದ್ದಾರೆ. ತಾವು ಬ್ರಾಹ್ಮಣನಾಗಿರುವ ಕಾರಣ ಹಾಗೆಲ್ಲಾ ಮಾಡಲ್ಲ ಎಂದು ಸ್ವಾಮಿ ತಿಳಿಸಿದ್ದಾರೆ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...