‘ಎರಡೆರಡು ಹಸು ಕರ್ಕೊಂಡು ದೇವೇಗೌಡರ ಮನೆಗೆ ಹೋಗೋಣ’

By Web DeskFirst Published Apr 15, 2019, 8:42 PM IST
Highlights

ದೇವೇಗೌಡರ ಕುಟುಂಬದ ವಿರುದ್ಧ ಹಾಸನ ಶಾಸಕ ಪ್ರೀತಂ ಗೌಡ ಹರಿಹಾಯ್ದಿದ್ದಾರೆ. ಕುಟುಂಬ ರಾಜಕಾರಣ ವಿಚಾರವನ್ನು ಮತ್ತೆ ಕೆದಕಿದ್ದಾರೆ.

ಹಾಸನ[ಏ. 15]  ಜೆಡಿಎಸ್ ಎಂಬುದು ಮಕ್ಕಳು ಮೊಮ್ಮಕ್ಕಳ ಪ್ರೈವೇಟ್ ಲಿಮಿಟೆಡ್. ಅದಕ್ಕೆ ನೀವು ನೀರು ಗೊಬ್ಬರ ಹಾಕಿದ್ರೆ ಅದು ಅವರ ಕುಟುಂಬಕ್ಕೆ ಸೀಮಿತ ಎಂದ ಶಾಸಕ ಪ್ರೀತಂಗೌಡ ವ್ಯಂಗ್ಯವಾಡಿದ್ದಾರೆ.

ಮಂಜಣ್ಣಗೆ ನೀವು 18ನೇ ತಾರೀಕು ಮತದ ನೀರು ಗೊಬ್ಬರ ಹಾಕಿದರೆ  ಅವರು ಬೀದಿ ಬದಿಯ ಮರದಂತೆ ನೆರಳಾಗ್ತಾರೆ. ಹಣ್ಣು ಬಿಟ್ಟಾಗ ಹಣ್ಣು ಕುಯ್ದು ತಿನ್ನಬಹುದು. ಆದ್ರೆ ದೇವೇಗೌಡ ಮತ್ತವರ ಮಕ್ಕಳಿಗೆ ಓಟ್ ಹಾಕಿದ್ರೆ ಅದು ಅವರ ಕಾಂಪೌಂಡ್ ಒಳಗಿರೊ ಗಿಡ,  ಕಾಂಪೌಂಡ್ 8 ಅಡಿ ಇರುತ್ತೆ ಗೇಟ್ ಗೆ ಬೀಗಾ ಹಾಕಿರುತ್ತೆ. ಅವರ ಕುಟುಂಬದವರಿಗೆ ಮಾತ್ರ ನೆರಳು,ಕುಟುಂಬದವರಿಗೆ ಮಾತ್ರ ಹಣ್ಣು ಎಂದು ಲೇವಡಿ ಮಾಡಿದರು.

ತೇಜಸ್ವಿ VS ಹರಿಪ್ರಸಾದ್, ವಿಪ್ರ ಸಭೆಯಲ್ಲೇ ಬ್ರಾಹ್ಮಣರ ಕಿತ್ತಾಟ

ಅಂತಹ ಪ್ರೈವೇಟ್ ಲಿಮಿಟೆಡ್ ಗೆ ಮತ ಹಾಕ್ತೀರೋ,ಪಬ್ಲಿಕ್ ಲಿಮಿಟೆಡ್ ಗೆ ಓಟ್ ಹಾಕ್ತೀರೊ ಯೋಚನೆ ಮಾಡಿ. ನಾವು,ಹಾಲು ಕರೀತೀವಿ ಹೊಲವನ್ನು ಉಳುತ್ತೇವೆ. 20 ಹಸು ಇಟ್ಕೊಂಡು 9 ಕೋಟಿ ಆದಾಯ ಅಂತಾ ತೋರಿಸೋರ್ಗೆ ಮತ ಹಾಕ್ತಿರೊ? ಅಥವಾ ಪ್ರಮಾಣಿಕವಾಗಿ ದೇಶ ಕಾಯುವ ನರೇಂದ್ರ ಮೋದಿಗೆ ಓಟ್ ಹಾಕ್ತೀರೊ? ಎಂದು ಪ್ರಶ್ನಿಸಿದರು.

ಪ್ರಜ್ವಲ್ ಗೆ 28 ವರ್ಷ ವಯಸ್ಸು, ಏನಪ್ಪಾ ನಿನ್ನ ಆದಾಯ ಅಂದ್ರೆ,20 ಹಸು ಸಾಕೊಂಡಿದೀನಿ 9 ಕೋಟಿ 78 ಲಕ್ಷ ರೂ. ಅಂತಾರೆ. ನಾವೆಲ್ಲ ಎರಡೆರಡು ಹಸು ಹಿಡ್ಕೊಂಡು ದೇವೇಗೌಡರ ಮನೆ ಹತ್ರಾ ಹೋಗೋಣ.. ನಮಗೂ ತೋರಿಸ್ರಪ್ಪಾ,ನಿಮ್ಮ‌ಮೊಮ್ಮಗನಿಗೆ 20 ಹಸು 9 ಕೋಟಿ ಆದಾಯ ಅದೇ ಲೆಕ್ಕದಲ್ಲಿ ನಮಗೆ  ನಮಗೆ ಎರಡು ಹಸು 90 ಲಕ್ಷ ಆದಾಯ ಬರೊ ಹಾಗೆ ಮಾಡಿಕೊಡಿ ಎಂದು ಕೇಳೋಣ ಎಂದು ವ್ಯಂಗ್ಯವಾಡಿದರು.

ಆಮೇಲೆ ನಿಮಗೆ ಮತ ಹಾಕ್ತೀವಿ ಅಂತಾ ನಾವು ಹೇಳಬೇಕು. ರೈತರ ಮಗ ನಾನು ನನ್ನ ಸಿಎಂ ಮಾಡಿ ಪ್ರಧಾನಿ ಮಾಡಿ ಅಂತಾ ಅಧಿಕಾರ ಪಡೆದರು. ದೇವೇಗೌಡರು ಒಬ್ಬರು ಮಗನ್ನ ಸಿಎಂ ಮಾಡಿದ್ರು,ಮತ್ತೊಬ್ಬರನ್ನ ಲೋಕೋಪಯೋಗಿ ಸಚಿವರನ್ನಾಗಿ ಮಾಡಿದ್ರು. ಇಷ್ಟು ಸಾಲದು ಎಂದು ಇಬ್ಬರು ಮೊಮ್ಮಕ್ಕಳನ್ನ ಹಾಸನದಲ್ಲೊಬ್ಬ, ಮಂಡ್ಯದಲ್ಲೊಬ್ಬ ಅಭ್ಯರ್ಥಿ ಮಾಡಿ ನಮ್ಮನ್ನ ಮೂರ್ಖರನ್ನಾಗಿ ಮಾಡಲು ಬಂದಿದ್ದಾರೆ ಎಂದು ದೂರಿದರು.

 

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!