'ರೈತ ಮಕ್ಕಳಿಗೆ ಕೃಷಿ, ತೋಟಗಾರಿಕೆ ಖಾತೆ ಬೇಡ, ಲೋಕೋಪಯೋಗಿ,ಇಂಧನ ಖಾತೆಯೇ ಬೇಕು'

Published : Mar 23, 2019, 02:47 PM IST
'ರೈತ ಮಕ್ಕಳಿಗೆ ಕೃಷಿ, ತೋಟಗಾರಿಕೆ ಖಾತೆ ಬೇಡ, ಲೋಕೋಪಯೋಗಿ,ಇಂಧನ ಖಾತೆಯೇ ಬೇಕು'

ಸಾರಾಂಶ

ಹಾಸನ ಲೋಕಸಭಾ ಬಿಜೆಪಿ ಅಭ್ಯರ್ಥಿ ಎ.ಮಂಜು ಮತ್ತೆ ದೇವೇಗೌಡ್ರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹಾಸನ, (ಮಾ.23): ರೈತರ ಮಕ್ಕಳಾದ ಇವರಿಗೆ ಕೃಷಿ ಖಾತೆ ಬೇಡಾ, ತೋಟಗಾರಿಕೆ ಖಾತೆ ಬೇಡ. ಲೋಕೋಪಯೋಗಿ ಖಾತೆ,ಇಂಧನ ಖಾತೆಯೇ ಬೇಕು ಎಂದು ಪರೋಕ್ಷವಾಗಿ ಎಚ್.ಡಿ.ರೇವಣ್ಣ ವಿರುದ್ಧ ಕಿಡಿಕಾರಿದ್ದಾರೆ.

ಹಾಸನದಲ್ಲಿಂದು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಎ. ಮಂಜು, ಯಾವ ಖಾತೆಯಲ್ಲಿ ದುಡ್ಡಿದೆಯೋ ಅದೇ ಖಾತೆ ಬೇಕು ಅಂತಾರೆ ಎಂದು ಜೆಡಿಎಸ್ ನಾಯಕರ ವಿರುದ್ದ  ವಾಗ್ದಾಳಿ ನಡೆಸಿದರು.

ನಮ್ಮ ನಾಮ ಪತ್ರ ಸಲ್ಲಿಕೆ ಕಾರ್ಯಕ್ರಮ ಐತಿಹಾಸಿಕ ಆಗಬೇಕು. ಸುಮಲತಾ  ನಾಮಪತ್ರದಲ್ಲಿ ಆದಂತೆ ಆಗಬೇಕು. ಜೆಡಿಎಸ್ ನಾಮಪತ್ರ ಸಲ್ಲಿಕೆ ವೇಳೆ ಬಂದದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ ಎಂದು ಕಾರ್ಯಕರ್ತರಿಗೆ  ಕರೆ ನೀಡಿದರು.

ಇನ್ನು ನಾಮಪತ್ರ ಸಲ್ಲಿಕೆ ದಿನ ಸ್ವಾಭಿಮಾನಿ ಸಮಾವೇಶ ಹೆಸರಿನಲ್ಲಿ ಕಾರ್ಯಕ್ರಮ ನಡೆಸಲಾಗುವುದು ಎಂದು ಮಂಜು ತಿಳಿಸಿದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!