ಅವನೆಂಥಾ ಸಿಂಹ?: ಪ್ರತಾಪ್‌ರನ್ನು ನರಿ ಎಂದ ಗುರು!

Published : Mar 23, 2019, 02:35 PM IST
ಅವನೆಂಥಾ ಸಿಂಹ?: ಪ್ರತಾಪ್‌ರನ್ನು ನರಿ ಎಂದ ಗುರು!

ಸಾರಾಂಶ

ಪ್ರತಾಪ್ ಸಿಂಹ ಕೇವಲ ಕಾಗದದ ಸಿಂಹ ಎಂದ ಮಹೇಶ್ ಚಂದ್ರಗುರು| ಪ್ರತಾಪ್ ಸಿಂಹ ಅವರಿಗೆ ಪತ್ರಿಕೋದ್ಯಮ ಪಾಠ ಹೇಳಿಕೊಟ್ಟಿದ್ದ ಮಹೇಶ್ ಚಂದ್ರಗುರು| ಪ್ರತಾಪ್ ಸಿಂಹ ಅವರಂತ ಉಗ್ರಗಾಮಿಗೆ ಮತ ಹಾಕಬೇಕಾ ಎಂದ ಮಹೇಶ್| ಚಾಮರಾಜನಗರ ಸಂಸದ ಧೃವನಾರಾಯಣ್ ಹೊಗಳಿದ ಮಹೇಶ್ ಚಂದ್ರಗುರು|

ಮೈಸೂರು(ಮಾ.23): ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಪತ್ರಿಕೋದ್ಯಮದ ಪಾಠ ಹೇಳಿಕೊಟ್ಟ ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಮಾಜಿ ಮುಖ್ಯಸ್ಥ ಪ್ರೋ. ಮಹೇಶ್ ಚಂದ್ರಗುರು, ಸಂಸದರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮೈಸೂರಿನ ಪತ್ರಕರ್ತರ ಭವನದಲ್ಲಿ ಪ್ರತಾಪ್ ಸಿಂಹ ಅದೆಂಥಾ ಸಿಂಹ ಎಂದು ಗುಡುಗಿರು ಮಹೇಶ್ ಚಂದ್ರಗುರು, ಅವನು ನನ್ನ ಶಿಷ್ಯನಾಗಿದ್ದ ಆತನ ಬಗ್ಗೆ ಎಲ್ಲವೂ ಬಲ್ಲೆ ಎಂದು ಗುಡುಗಿದ್ದಾರೆ.

ಪ್ರತಾಪ್ ಸಿಂಗ್ ಬರೀ ಕಾಗದದ ಸಿಂಹ ಎಂದಿರುವ ಮಹೇಶ್ ಚಂದ್ರಗುರು, ಅವನಂತ ಉಗ್ರಗಾಮಿಗೆ ಮತ ಏಕೆ ಹಾಕಬೇಕು ಎಂದು ಕೇಳಿದ್ದಾರೆ. ಇದೇ ವೇಳೆ ಚಾಮರಾಜನಗರ ಸಂಸದ ಧೃವನಾರಾಯಣ್ ಅವರನ್ನು ಹೊಗಳಿರುವ ಮಹೇಶ್, ಅವರು ರಾಜ್ಯದಲ್ಲೇ ಉತ್ತಮ ಸಂಸದರು ಎಂದು ಶಹಬ್ಬಾಸಗಿರಿ ನೀಡಿದ್ದಾರೆ.

ಧೃವನಾರಾಯಣ್ ದೇಶದಲ್ಲೇ ಕ್ಷೇತ್ರ ಅಭಿವೃದ್ಧಿಗೊಳಿಸಿದ ನಾಲ್ಕನೇ ಉತ್ತಮ ಸಂಸದ ಎಂದು ಮನ್ನಣೆ ಪಡೆದಿದ್ದಾರೆ. ಅಂತವರನ್ನು ಗೆಲ್ಲಿಸದೇ ಇನ್ಯಾರನ್ನು ಗೆಲ್ಲಿಸುತ್ತೀರಾ ಎಂದು ಮಹೇಶ್ ಚಂದ್ರಗುರು ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಪ್ರತಾಪ್ ಸಿಂಹ ಸೋಲಬೇಕು, ಚಾಮರಾಜನಗರದಲ್ಲಿ ಧೃವನಾರಾಯಣ್ ಗೆಲ್ಲಬೇಕು ಎಂದು ಮಹೇಶ್ ಚಂದ್ರಗರು ಈ ವೇಳೆ ಹಾರೈಸಿದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!