ನೀವು #ಪಪ್ಪು ಅಂತಾ ಬರ್ಕೊಳ್ಳಿ: ಬಿಜೆಪಿ ಸಚಿವರ ಹೇಳಿಕೆಗೆ ಉರ್ಕೊಂಡ ಕಾಂಗ್ರೆಸ್!

Published : Mar 19, 2019, 03:17 PM IST
ನೀವು #ಪಪ್ಪು ಅಂತಾ ಬರ್ಕೊಳ್ಳಿ: ಬಿಜೆಪಿ ಸಚಿವರ ಹೇಳಿಕೆಗೆ ಉರ್ಕೊಂಡ ಕಾಂಗ್ರೆಸ್!

ಸಾರಾಂಶ

#MainBhiChowkidar ಅಭಿಯಾನಕ್ಕೆ ವ್ಯಂಗ್ಯವಾಡಿದ್ದ ಕಾಂಗ್ರೆಸ್‌ಗೆ ತಿರುಗೇಟು| ಹರಿಯಾಣ ಬಿಜೆಪಿ ಸಚಿವ ಅನಿಲ್ ವಿಜ್ ಹೇಳಿಕೆಗೆ ಕಾಂಗ್ರೆಸ್ ಸುಸ್ತು| ನೀವು ಬೇಕಾದರೆ #ಪಪ್ಪು ಎಂದು ಬರೆದುಕೊಳ್ಳಿ ಎಂದ ಅನಿಲ್ ವಿಜ್| ಬಿಜೆಪಿ ನಾಯಕರ ಹೆಸರಿನ ಮುಂದೆ #ಚೌಕಿದಾರ್ ಪದ ಬಳಕೆಗೆ ಸಮರ್ಥನೆ|

ನವದೆಹಲಿ(ಮಾ.19): ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರಿನ ಮುಂದೆ #ಚೌಕಿದಾರ್ ಎಂದು ಇದಕ್ಕೆ ಕಾಂಗ್ರೆಸ್ ವ್ಯಂಗ್ಯವಾಡಿತ್ತು. ಇದೀಗ ಕಾಂಗ್ರೆಸ್‌ಗೆ ತಿರುಗೇಟು ನೀಡಿರುವ ಹರಿಯಾಣದ ಸಚಿವ ಅನಿಲ್ ವಿಜ್, ನೀವು ಬೇಕಾದರೆ ನಿಮ್ಮ ಹೆಸರಿನ ಮುಂದೆ #ಪಪ್ಪು ಎಂದು ಬರೆದುಕೊಳ್ಳಿ ಎಂದು ಕುಹುಕವಾಡಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅನಿಲ್ ವಿಜ್, ಬಿಜೆಪಿ ನಾಯಕರು ತಮ್ಮ ಹೆಸರಿನ ಮುಂದೆ #ಚೌಕಿದಾರ್ ಎಂದು ಬರೆದುಕೊಂಡರೆ ಕಾಂಗ್ರೆಸ್‌ಗೆ ಚಿಂತೆ ಏಕೆ ಎಂದು ಪ್ರಶ್ನಿಸಿದ್ದಾರೆ.

ನಿಮಗೂ ಹೆಸರಿನ ಮುಂದೆ ಏನಾದರೂ ಸೇರಿಸಿಕೊಳ್ಳಬೇಕು ಎಂದು ಬಯಕೆಯಾಗಿದ್ದರೆ #ಪಪ್ಪು ಎಂದು ಸೇರಿಸಿಕೊಳ್ಳಿ ಎಂದು ಅನಿಲ್ ವಿಜ್ ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ #MainBhiChowkidar ಅಭಿಯಾನ ಆರಂಭಿಸಿದ ಬಳಿಕ ಪ್ರಧಾನಿಯೂ ಸೇರಿದಂತೆ ಎಲ್ಲಾ ಬಿಜೆಪಿ ನಾಯಕರು ಟ್ವಿಟ್ಟರ್‌ನಲ್ಲಿ ತಮ್ಮ ಹೆಸರಿನ ಮುಂದೆ #Chwikidar ಎಂದು ಬರೆದುಕೊಂಡಿದ್ದಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!