ಕಾವಲುಗಾರ ಬೇಕಾದ್ರೆ ನೇಪಾಳಕ್ಕೆ ಹೋಗ್ತಿನಿ: ಹಾರ್ದಿಕ್ ವ್ಯಂಗ್ಯ!

By Web DeskFirst Published Apr 23, 2019, 6:08 PM IST
Highlights

‘ನನಗೆ ಕಾವಲುಗಾರ ಬಾಕಾದರೆ ನೇಪಾಳಕ್ಕೆ ಹೋಗುತ್ತೇನೆ’| ‘ಮೋದಿ ಕಾವಲುಗಾರರಾಗಲು ಬಯಸಿದರೆ ನೇಪಾಳಕ್ಕೆ ಹೋಗಲಿ’| ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ವಿವಾದಾತ್ಮಕ ಹೇಳಿಕೆ| 
ನವಜೋತ್ ಸಿಧು ಹೇಳಿಕೆ ಪುನರುಚ್ಛಿಸಿದ ಹಾರ್ದಿಕ್ ಪಟೇಲ್|

ಅಹಮದಾಬಾದ್(ಏ.23): ನನಗೆ ಕಾವಲುಗಾರ ಬಾಕಾದರೆ ನೇಪಾಳಕ್ಕೆ ಹೋಗುತ್ತೇನೆ ಹೊರತು ಭಾರತದ ಪ್ರಧಾನಿ ಬಳಿ ಅಲ್ಲ ಎಂದು ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಹಾರ್ದಿಕ್ ಪಟೇಲ್, ಮೋದಿ ಕಾವಲುಗಾರರಾಗಲು ಬಯಿಸಿದರೆ ಬೇಕಾದರೆ ನೇಪಾಳಕ್ಕೆ ಹೋಗಲಿ ಎಂದು ವ್ಯಂಗ್ಯವಾಡಿದ್ದಾರೆ.

Congress leader Hardik Patel after casting his vote in Viramgam,says "Chowkidaar dhoondhna hoga toh mein Nepal chala jaaunga, mujhe desh mein PM chahiye jo iss desh ke arthvyavastha ko, shiksha ko, yuvaon, jawanon ko mazboot kar sake. Mujhe chowkidar nahi pradhan mantri chahiye." pic.twitter.com/dYGjy7S7YW

— ANI (@ANI)

ಈ ಹಿಂದೆ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಕೂಡ ಇಂತದ್ದೇ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏ.18ರಂದು ಮುಗಿದಿದ್ದು,ಏ.23ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

click me!