ಲೋಕಸಭಾ ಚುನಾವಣೆ : ದೇಶದಾದ್ಯಂತ ಮತಯಂತ್ರಗಳಲ್ಲಿ ದೋಷ!

By Web DeskFirst Published Apr 23, 2019, 5:03 PM IST
Highlights

ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ  ಗಂಭೀರ ಆರೋಪ ಒಂದು ಕೇಳಿ ಬಂದಿದೆ. 

ಲಕ್ನೋ : ದೇಶದಲ್ಲಿ ಲೋಕಸಭಾ ಮಹಾ ಸಮರ ನಡೆಯುತ್ತಿದ್ದು,  ಚುನಾವಣೆ ವೇಳೆ ಬಳಕೆ ಮಾಡಲಾದ ಮತಯಂತ್ರಗಳಲ್ಲಿ ದೋಷವಿದೆ ಎಂದು ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. 

ಬಿಜೆಪಿ ಹೆಚ್ಚು ಮತಗಳನ್ನು ಪಡೆಯುವ ಉದ್ದೇಶದಿಂದ ಇಂತಹ ಕ್ರಿಮಿನಲ್ ಕೃತ್ಯ ಎಸಗಿದೆ.

ಅಲ್ಲದೇ ಚುನಾವಣಾ ಅಧಿಕಾರಿಗಳು ಕೂಡ ಮತಯಂತ್ರ ಬಳಕೆಯಲ್ಲಿ ತರಬೇತಿ ಹೊಂದಿಲ್ಲವೆಂದು ಆರೋಪಿಸಿದ್ದಾರೆ. 

ಚುನಾವಣೆಯ ಈ ವೇಳೆ ಒಟ್ಟು 350ಕ್ಕೂ ಹೆಚ್ಚು ಮತಯಂತ್ರಗಳನ್ನು ಬದಲಾಯಿಸಲಾಗಿದ್ದು, ಇದೊಂದು ಅತ್ಯಂತ ದೊಡ್ಡ ಕ್ರಿಮಿನಲ್ ಅಪರಾಧವಾಗಿದೆ ಎಂದು ಯಾದವ್  ಟ್ವೀಟ್ ಮಾಡಿದ್ದಾರೆ. 

ಈ ಬಗ್ಗೆ ಚುನಾವಣಾ ಆಯೋಗವು ಅಗತ್ಯ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಅಗತ್ಯವಿದೆ. ಹಲವು ಕಡೆ ಮತಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಕೆಲವೆಡೆ ಮತಯಂತ್ರಗಳು ಕೆಟ್ಟು ನಿಂತಿದ್ದರೆ. ಇನ್ನು ಕೆಲವು ಕಡೆ ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಇದೇನಾ ಭಾರತ ಸರ್ಕಾರ ಹೇಳಿದ ಡಿಜಿಟಲ್ ಇಂಡಿಯಾ ಎಂದು ಪ್ರಶ್ನಿಸಿದ್ದಾರೆ. 

click me!