ಮೋದಿ ಬೆಳೆದಂತೆ ದೇಶದಲ್ಲಿ ಏನೇನಾಯ್ತು? ಇದು ಲಾಡ್ ಮಹಾವರದಿ!

By Web DeskFirst Published Apr 19, 2019, 10:43 PM IST
Highlights

ಧಾರವಾಡದ ಕಾಂಗ್ರೆಸ್ ಸಮಾವೇಶದಲ್ಲಿ ಮಾಜಿ ಸಚಿವ ಸಂತೋಷ್ ಲಾಡ್ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ ಮಾಡಿದ್ದಾರೆ.

ಧಾರವಾಡ[ಏ. 19]  ಪ್ರಧಾನಿ ನರೇಂದ್ರ ಮೋದಿ‌ ಬೆಳೆತಾ ಬೆಳೆತಾ ಇದ್ದಂತೆ ದೇಶದಲ್ಲಿ ಕಾಂಗ್ರೆಸ್ ಏನೆಲ್ಲ ಮಾಡಿದೆ ಎಂಬ ವರದಿಯನ್ನು ಮಾಜಿ ಸಚಿವ ಸಂತೋಷ್ ಲಾಡ್ ಮಂಡಿಸಿದ್ದಾರೆ!

ಧಾರವಾಡ ಜಿಲ್ಲೆ ಕಲಘಟಗಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಲಾಡ್, ಮೋದಿ 18 ವರ್ಷ ‌ಇದ್ದಾಗ ನಮ್ಮ ದೇಶದಲ್ಲಿ ಕಾಂಗ್ರೆಸ್ ಹಲವಾರು ಡ್ಯಾಮ್‌ಗಳನ್ನು ಕಟ್ಟಿಸಿತು. ಮೋದಿ 21 ವರ್ಷಕ್ಕೆ ಚಡ್ಡಿ ಹಾಕಿಕೊಂಡು ಆರ್.ಎಸ್.ಎಸ್.ಗೆ ಹೋಗುವಾಗ ಗರಿಬೀ ಹಟಾವೋ‌ ಮಾಡಿತು.  ಮೋದಿಗೆ 28 ವರ್ಷ ಇದ್ದಾಗ ಜೀತದಾಳು ಪದ್ಧತಿಯನ್ನು ಕಾಂಗ್ರೆಸ್ ನಿರ್ಮೂಲನೆ ಮಾಡಿತು. ಮೋದಿಗೆ 35 ವರ್ಷ ಆದಾಗ ಆಪರೇಷನ್ ಮೇಘಾಧೂತ ಮಾಡಿತು ಎಂದು ವ್ಯಂಗ್ಯದ ಚಾಟಿ ಬೀಸಿದರು.

ಫಲಿತಾಂಶಕ್ಕೂ ಮುನ್ನವೇ ನಿಖಿಲ್ ಕೆ. ಸಂಸದರು, ಮಂಡ್ಯ!

ಪಾಕ್‌ನ್ನು ಮೊದಲು ಗಡಿಯಿಂದ ಹೊರಗೆ ಅಟ್ಟಿದ್ದು ನಮ್ಮ‌ ಕಾಂಗ್ರೆಸ್. ಮೋದಿಗೆ 40 ವರ್ಷ ಇದ್ದಾಗ ನಾವು ಕೈಗಾರಿಕಾ ನೀತಿ ತಂದೆವು. ಮೋದಿ ಬುಲೆಟ್ ಟ್ರೈನ್, ಸ್ಮಾರ್ಟ್ ಸಿಟಿ ಬಗ್ಗೆ ಮಾತಾಡ್ತಾ ಇಲ್ಲ. ಕೇವಲ ಭಾರತ ದೇಶ, ಭಾರತ ಮಾತೆ ಬಗ್ಗೆ ಮಾತ್ರ ಮೋದಿ ಮಾತಾಡ್ತಾ ಇದಾರೆ. ಮೋದಿ‌ ನೋಟ್ ಬ್ಯಾನ್ ಮಾಡಿದಾಗ ಒಬ್ಬ ಸಾಹುಕಾರ ಕೂಡ ಸಾಯಲಿಲ್ಲ, ಬಡವರೇ ಸತ್ತರಲ್ಲವೇ? ಎಂದು ವಾಗ್ದಾಳಿ ಮಾಡಿದರು.

ಅಮಿತ ಷಾದು ಕೋ ಆಪರೇಟಿವ್ ಬ್ಯಾಂಕ್ ಇದೆ . ಆ ಬ್ಯಾಂಕ್ 750 ಕೋಟಿ ತಗೊಂಡಿದ್ದು  ಎರಡು ಪ್ರತಿಶತ ಜಿಡಿಪಿ ಹೋಗಿದೆ. 3 ಲಕ್ಷ ಕೋಟಿ ದೇಶಕ್ಕೆ ನಷ್ಟವಾಗಿದೆ.
ಮೋದಿ‌ ಇಲ್ಲಿಯವರೆಗೆ ಸುದ್ದಿಗೋಷ್ಠಿ ಮಾಡಿಲ್ಲ ಕೇವಲ ಮನ್ ಕಿ ಬಾತ್ ಮಾಡುತ್ತಾರೆ ಎಂದು ಆರೋಪಿಸಿದರು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

click me!