ಟೋಪಿ, ಕನ್ನಡಕ ಕಡ್ಡಾಯ: ಮಾಧ್ಯಮಗಳಿಗೆ ಕೇಂದ್ರದ ಸೂಚನೆ!

Published : May 30, 2019, 01:36 PM IST
ಟೋಪಿ, ಕನ್ನಡಕ ಕಡ್ಡಾಯ: ಮಾಧ್ಯಮಗಳಿಗೆ ಕೇಂದ್ರದ ಸೂಚನೆ!

ಸಾರಾಂಶ

ಪ್ರಧಾನಿ ಮೋದಿ ಪ್ರಮಾಣವಚನ ಸಮಾರಂಭಕ್ಕೆ ಕ್ಷಣಗಣನೆ| ಸಂಜೆ 7 ಗಂಟೆಗೆ ಪ್ರಧಾನಿ ಮೋದಿ ಪ್ರಮಾಣವಚನ| ರಾಷ್ಟ್ರ ರಾಜಧಾನಿಯಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದ ತಾಪಮಾನ| ಟೋಪಿ, ಕನ್ನಡಕ ಧರಿಸುವಂತೆ ಮಾಧ್ಯಮಗಳಿಗೆ ಕೇಂದ್ರದ ಸೂಚನೆ| ಮಾಧ್ಯಮ ಮಿತ್ರರು ಬಿಸಿಲಿನಿಂದ ರಕ್ಷಣೆ ಪಡೆಯುವಂತೆ ಮನವಿ|

ನವದೆಹಲಿ(ಮೇ.30): ಪ್ರಧಾನಿ ನರೇಂದ್ರ ಮೋದಿ ಪ್ರಮಾಣವಚನ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಪ್ರಮಾಣವಚನ ಸಮಾರಂಭಕ್ಕಾಗಿ ರಾಷ್ಟ್ರಪತಿ ಭವನ ಸಜ್ಜಾಗಿದೆ.

ಈ ಮಧ್ಯೆ ಪ್ರಮಾಣವಚನ ಸಮಾರಂಭದ ನೇರ ಪ್ರಸಾರ ಮಾಡುವ ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಹೊಸ ಸಲಹೆಯೊಂದನ್ನು ನೀಡಿದ್ದು, ಸಮಾರಂಭ ಮುಗಿಯುವವರೆಗೂ ಪತ್ರಕರ್ತರು ಟೋಪಿ ಮತ್ತು ಸನ್‌ಗ್ಲಾಸ್ ಹಾಕಿಕೊಳ್ಳುವಂತೆ ಸೂಚನೆ ನೀಡಿದೆ.

ರಾಷ್ಟ್ರ ರಾಜಧಾನಿಯಲ್ಲಿ ಬಿಸಲಿನ ತಾಪ ಹೆಚ್ಚಿದ್ದು, ಸಂಜೆಯಿಂದಲೇ ನೇರ ಪ್ರಸಾರ ಶುರು ಮಾಡುವ ಸುದ್ದಿವಾಹಿನಿಗಳ ವರದಿಗಾರರು ರಕ್ಷಣೆಗಾಗಿ ಟೋಪಿ ಮತ್ತು ತಂಪು ಕನ್ನಡಕ ಬಳಸುವಂತೆ ಮನವಿ ಮಾಡಲಾಗಿದೆ.

ನವದೆಹಲಿಯಲ್ಲಿ ಇಂದು ತಾಪಮಾನ 44 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಮಾಧ್ಯಮ ಮಿತ್ರರು ಬಿಸಿಲಿನಿಂದ ರಕ್ಷಣೆ ಪಡೆಯುವಂತೆ ಪ್ರಧಾನಿಯವರ ಪ್ರಚಾರ ಮತ್ತು ಉಲ್ಲೇಖ ಘಟಕ ಮನವಿ ಮಾಡಿದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!