ಮೋದಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಸಿದ್ದರಾಮಯ್ಯ

By Web DeskFirst Published May 6, 2019, 1:32 PM IST
Highlights

ಮಾಜಿ ಪ್ರಧಾನಿ ರಾಜೀವ್ ಗಾಂಧಿ ನಂ. 1 ಭ್ರಷ್ಟಾಚಾರಿ ಎಂದ ಪಿಎಂ ಮೋದಿ| ಮೋದಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದ್ರು ಮಾಜಿ ಸಿಎಂ ಸಿದ್ದರಾಮಯ್ಯ| ಶುರುವಾಯ್ತು ಟ್ವೀಟ್ ವಾರ್

ಬೆಂಗಳೂರು[ಮೇ.06]: ರಾಹುಲ್ ಗಾಂಧಿಯನ್ನು ಟೀಕಿಸುವ ಭರದಲ್ಲಿ ಪ್ರಧಾನಿ ಮೋದಿ ರಾಜೀವ್ ಗಾಂಧಿಯನ್ನು ಭ್ರಷ್ಟಾಚಾರಿ ನಂ.1 ಎಂದು ಹಂಗಿಸಿರುವುದು ಸದ್ಯ ಭಾರೀ ಚರ್ಚೆ ಹುಟ್ಟು ಹಾಕಿದೆ. ಮೋದಿ ಹೇಳಿಕೆಗೆ ವಿಪಕ್ಷಗಳು ಭಾರೀ ಆಕ್ರೋಶ ವ್ಯಕ್ತಪಡಿಸಿರುವ ಬೆನ್ನಲ್ಲೇ, ಮಾಜಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆಂದು ಕಿಡಿ ಕಾರಿದ್ದಾರೆ.

ರಾಜೀವ್ ಗಾಂಧಿ ವಿರುದ್ಧ ಮೋದಿ ನೀಡಿದ ಹೇಳಿಕೆಗೆ ತಮ್ಮ ಟ್ವಿಟರ್ ಖಾತೆಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ 'ವಿನಾಶಕಾಲೇ ವಿಪರೀತ ಬುದ್ದಿ. ತಾಯಿಯಂತೆಯೇ ಉಗ್ರರಿಗೆ ಬಲಿಯಾದ ರಾಜೀವ್‌ಜಿ ಬಗ್ಗೆ ನೀಚತನದ ಮಾತನಾಡುತ್ತಿರುವ ಮೋದಿಯವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರ ಚಿಕಿತ್ಸೆಗೆ ಬೇಕಾದ ವಿಶ್ರಾಂತಿಯನ್ನು ದೇಶದ ಮತದಾರರು ಈ ಬಾರಿ ನೀಡುತ್ತಾರೆ. ಅವರು ಈ ಕಾಯಿಲೆಯಿಂದ ಶೀಘ್ರ ಗುಣಮುಖರಾಗಲಿ' ಎಂದು ಬರೆದುಕೊಂಡಿದ್ದಾರೆ.

ವಿನಾಶಕಾಲೇ ವಿಪರೀತ ಬುದ್ದಿ.
ತಾಯಿಯಂತೆಯೇ ಉಗ್ರರಿಗೆ ಬಲಿಯಾದ ರಾಜೀವ್‌ಜಿ ಬಗ್ಗೆ ನೀಚತನದ ಮಾತನಾಡುತ್ತಿರುವ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರ ಚಿಕಿತ್ಸೆಗೆ ಬೇಕಾದ ವಿಶ್ರಾಂತಿಯನ್ನು ದೇಶದ ಮತದಾರರು ಈ ಬಾರಿ ನೀಡುತ್ತಾರೆ. ಅವರು ಈ ಕಾಯಿಲೆಯಿಂದ ಶೀಘ್ರ ಗುಣಮುಖರಾಗಲಿ.

— Siddaramaiah (@siddaramaiah)

'ಹಿರಿಯಣ್ಣನ ಚಾಳಿ ಮನೆ ಮಂದಿಗೆಲ್ಲ'

'ಹಿರಿಯಣ್ಣನ ಚಾಳಿ ಮನೆ ಮಂದಿಗೆಲ್ಲ'.
ಸೋಲಿನ ಭೀತಿಯಲ್ಲಿರುವ ಯವರಿಂದ ಈಶ್ವರಪ್ಪನವರ ವರೆಗೆ ಎಲ್ಲರ ನಾಲಿಗೆಗಳಲ್ಲಿ ಈ ಹತಾಶೆ ಕಾಣಿಸುತ್ತಿದೆ.
ಸಾರ್ವಜನಿಕ ಹಿತದೃಷ್ಟಿಯಿಂದ 'ಮೈ ಚೌಕಿದಾರ್' ಅಲ್ಲ 'ಮೈ ಪಾಗಲ್' ಎಂದು ಬಿಜೆಪಿ ನಾಯಕರೆಲ್ಲ‌ ಘೋಷಿಸಿಕೊಳ್ಳುವುದು ಒಳ್ಳೆಯದು.

— Siddaramaiah (@siddaramaiah)

ಈ ಟ್ವೀಟ್ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿದ್ದು, ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆಗಳ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿ ನಾಯಕರ ಹೇಳಿಕೆಗಳಿಗೆ ಟಾಂಗ್ ನೀಡಿರುವ ಮಾಜಿ ಸಿಎಂ 'ಹಿರಿಯಣ್ಣನ ಚಾಳಿ ಮನೆ ಮಂದಿಗೆಲ್ಲ'. ಸೋಲಿನ ಭೀತಿಯಲ್ಲಿರುವ ಮೋದಿಯವರಿಂದ ಈಶ್ವರಪ್ಪನವರವರೆಗೆ ಎಲ್ಲರ ನಾಲಿಗೆಗಳಲ್ಲಿ ಈ ಹತಾಶೆ ಕಾಣಿಸುತ್ತಿದೆ.  ಸಾರ್ವಜನಿಕ ಹಿತದೃಷ್ಟಿಯಿಂದ 'ಮೈ ಚೌಕಿದಾರ್' ಅಲ್ಲ 'ಮೈ ಪಾಗಲ್' ಎಂದು ಬಿಜೆಪಿ ನಾಯಕರೆಲ್ಲ‌ ಘೋಷಿಸಿಕೊಳ್ಳುವುದು ಒಳ್ಳೆಯದು ಎಂದಿದ್ದಾರೆ.

click me!