ನಿಖಿಲ್ ಪರ ಪ್ರಚಾರಕ್ಕೆ ಬರಲ್ಲ ಸಿದ್ದರಾಮಯ್ಯ: ಮತ್ತೆಂಗೆ ಮಾರಾಯಾ?

Published : Mar 24, 2019, 04:22 PM IST
ನಿಖಿಲ್ ಪರ ಪ್ರಚಾರಕ್ಕೆ ಬರಲ್ಲ ಸಿದ್ದರಾಮಯ್ಯ: ಮತ್ತೆಂಗೆ ಮಾರಾಯಾ?

ಸಾರಾಂಶ

ಮಂಡ್ಯದಲ್ಲಿ ಏನಾಗ್ತಿದೆ ಅನ್ನೋದು ಯಾರ ತರ್ಕಕ್ಕೂ ನಿಲುಕುತ್ತಿಲ್ಲ| ನಿಖಿಲ್ ಪರ ಪ್ರಚಾರಕ್ಕೆ ಬರಲ್ಲ ಎಂದ ಮಾಜಿ ಸಿಎಂ ಸಿದ್ದರಾಮಯ್ಯ| ದೇವೇಗೌಡರೊಂದಿಗೆ ಪ್ರಚಾರಕ್ಕೆ ಬರುವುದಾಗಿ ಸ್ಪಷ್ಟನೆ| ಅನಿತಾ ಕುಮಾರಸ್ವಾಮಿ ಮನವಿ ನಯವಾಗಿ ತಿರಸ್ಕರಿಸಿದ ಸಿದ್ದರಾಮಯ್ಯ| ನಾಮಪತ್ರ ಸಲ್ಲಿಕೆ ವೇಳೆಯೂ ಇರಲ್ಲ ಸಿದ್ದರಾಮಯ್ಯ|

ಮಂಡ್ಯ(ಮಾ.24): ಮಹತ್ವದ ಬೆಳವಣಿಗೆಯೊಂದರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡಲು ಮಾಜಿ ಸಿಎಂ ಸಿದ್ದರಾಮಯ್ಯ ನಯವಾಗಿ ನಿರಾಕರಿಸಿದ್ದಾರೆ.

ನಿಖಿಲ್ ಪರ ಪ್ರಚಾರ ಮಾಡುವಂತೆ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಮಾಡಿದ ಮನವಿಯನ್ನು ನಯವಾಗಿ ತಿರಸ್ಕರಿಸಿರುವ ಸಿದ್ದರಾಮಯ್ಯ, ದೇವೇಗೌಡರೊಂದಿಗೆ ಪ್ರಚಾರಕ್ಕೆ ಬರುವುದಾಗಿ ತಿಳಿಸಿದ್ದಾರೆ. ಈ ಮೂಲಕ ವೈಯಕ್ತಿಕವಾಗಿ ಪ್ರಚಾರ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

"

ನಿಖಿಲ್ ಕುಮಾರಸ್ವಾಮಿ ನಾಳೆ(25-03-2019) ನಾಮಪತ್ರ ಸಲ್ಲಿಸಲಿದ್ದು, ಇದಕ್ಕೂ ಸಿದ್ದರಾಮಯ್ಯ ಗೈರು ಹಾಜರಾಗಲಿದ್ದಾರೆ. ನಾಳೆ ಚಿತ್ರದುರ್ಗದ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸಲಿದ್ದು, ಅಲ್ಲಿಗೇ ಹೋಗಬೇಕಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!