ಲೋಕಸಭಾ ಟಿಕೆಟ್ ನೀಡಿ - ಇಲ್ಲ ನಷ್ಟ ಎದುರಿಸಿ : ಬಿಜೆಪಿ ನಾಯಕ ವಾರ್ನಿಂಗ್

By Web DeskFirst Published Mar 30, 2019, 1:44 PM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಿದ್ದು, ಬಿಜೆಪಿ ತಮಗೆ ಟಿಕೆಟ್ ನೀಡಲಿ, ಇಲ್ಲ ಮುಂದಿನ ನಡೆ ಎದುರಿಸಲಿ ಎಂದು ಬಿಜೆಪಿ ನಾಯಕರೋರ್ವರು ಎಚ್ಚರಿಕೆ ನೀಡಿದ್ದಾರೆ. 

ನವದೆಹಲಿ : ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ.  ಈ ಸಂದರ್ಭದಲ್ಲಿ ಹಲವು ಟಿಕೆಟ್ ಆಕಾಂಕ್ಷಿಗಳಲ್ಲಿ ಅಸಮಾಧಾನವು ಭುಗಿಲೇಳುತ್ತಿದೆ. 

ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋತಿದ್ದ ಅಜಯ್ ಅಗರ್ವಾಲ್ ಇದೀಗ ಮತ್ತೊಮ್ಮೆ ಬಿಜೆಪಿಯಿಂದ ಟಿಕೆಟ್ ಗೆ ಬೇಡಿಕೆ ಇಟ್ಟಿದ್ದಾರೆ.

ಈ ಬಾರಿ ರಾಯ್ ಬರೇಲಿ ಕ್ಷೇತ್ರದಿಂದ ಪ್ರಿಯಾಂಕ ಗಾಂಧಿ ಕೂಡ ಸ್ಪರ್ಧೆ ಮಾಡುವ ಸಾಧ್ಯತೆ ಇದ್ದು, ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕೂಡ ಈ ಕ್ಷೇತ್ರದಿಂದ ಚುನಾವನೆ ಎದುರಿಸಲಿದ್ದಾರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಸುದ್ದಿಯಾಗುತ್ತಿವೆ. 

ಕಳೆದ ಚುನಾವಣೆಯಲ್ಲಿ ಸೋನಿಯಾ ವಿರುದ್ಧ 1.73 ಲಕ್ಷ ಮತ ಪಡೆದಿದ್ದು, ಈ ಬಾರಿ ಟಿಕೆಟ್ ನೀಡಬೇಕೆಂದಿದ್ದಾರೆ. ಇಲ್ಲವಾದಲ್ಲಿ ಪಕ್ಷ  ಮುಂದಿನ ನಡೆಯನ್ನು ಎದುರಿಸಲು ಸಿದ್ಧವಾಗಲಿ ಎಂದು ಎಚ್ಚರಿಕೆ ನೀಡಿದ್ದಾರೆ. 

ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಹಾಗೂ ಕೇಂದ್ರದ ನಾಯಕರಿಂದ ತಮಗೆ ಯಾವುದೇ ರೀತಿಯ ಬೆಂಬಲ ದೊರಕಲಿಲ್ಲ. ಈ ನಿಟ್ಟಿನಲ್ಲಿ ಸೋಲು ಕಾಣಬೇಕಾಯ್ತು. 

ಈ ಬಾರಿ ಟಿಕೆಟ್ ನೀಡದಿದ್ದಲ್ಲಿ ಬಿಜೆಪಿ ಭಾರೀ ಮೊತ್ತದ ನಷ್ಟ ಅನುಭವಿಸುವುದು ಖಚಿತ. ಅಲ್ಲದೇ ವೈಶ್ಯ ಸಮುದಾಯದ ವಿರೋಧವನ್ನು ಎದುರಿಸುವುದು ಖಚಿತ ಎಂದಿದ್ದಾರೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

click me!