ದೇವರ ದರ್ಶನ ಮಾಡಿಕೊಂಡು ಬಂದು ನಂತರ ಮತದಾನ ಮಾಡಬೇಕು ಎಂದುಕೊಂಡಿದ್ದವರು ದಾರುಣ ಸಾವಿಗೆ ಈಡಾಗಿದ್ದಾರೆ.
ಬಾಗಲಕೋಟೆ(ಏ. 23) ವೋಟ್ ಹಾಕುವ ಮುನ್ನ ದೇಗುಲಕ್ಕೆ ತೆರಳಿದ್ದ ಇಬ್ಬರು ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾರೆ.
ಬಾದಾಮಿ ತಾಲೂಕಿನ ಖ್ಯಾಡ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಬೆಳಿಗ್ಗೆ ಕಾತರಕಿ ಗ್ರಾಮದ ಗುಡ್ಡದಲ್ಲಿರೋ ರಂಗನಾಥ್ ದೇಗುಲಕ್ಕೆ ತೆರಳುವ ವೇಳೆ ಶಂಕ್ರಪ್ಪ ಕೋಟಿ(46), ರಂಗಪ್ಪ ಕರಕಿಕಟ್ಟಿ (45) ವಿದ್ಯುತ್ ಶಾಕ್ ನಿಂದ ಮೃತಪಟ್ಟಿದ್ದಾರೆ.
ಲಂಕಾ ಸ್ಫೋಟದಲ್ಲಿ ನಟ ಗಣೇಶ್ ಸ್ನೇಹಿತರ ದುರ್ಮರಣ
ದೇಗುಲಕ್ಕೆ ಹೋಗಿ ಬಂದ ಬಳಿಕ ವೋಟ್ ಹಾಕುವ ಆಲೋಚನೆಯಲ್ಲಿದ್ದವರು ದಾರುಣ ಸಾವಿಗೀಡಾಗಿದ್ದಾರೆ.