ನಿಮ್ಮ ಹೆಸರಲ್ಲಿ ಮೊದಲೇ ಮತ ಹಾಕಿದ್ದಾರಾ: ಹಾಗಾದ್ರೆ ಟೆಂಡರ್‌ ಮತ ಚಲಾಯಿಸಿ!

By Web DeskFirst Published Apr 9, 2019, 12:05 PM IST
Highlights

ನಿಮ್ಮ ಹೆಸರಲ್ಲಿ ನಕಲಿ ಮತದಾರರು ಮತ ಚಲಾಯಿಸಿದ್ದರೆ ಅಧಿಕಾರಿಗಳ ಗಮನಕ್ಕೆ ತನ್ನಿ | ಟೆಂಡರ್ ಮತದಾನಕ್ಕೆ ಅವಕಾಶ | ಯಾವುದೇ ಮತಗಟ್ಟೆಯಲ್ಲಿ 5 ಕ್ಕಿಂತ ಹೆಚ್ಚು ನಕಲಿ ಮತದಾನವಾದರೆ ಮರು ಮತದಾನ 

ಬೆಂಗಳೂರು (ಏ. 09): ನಕಲಿ ಮತದಾನವಾಗಿರುವ ಬಗ್ಗೆ ಅಸಲಿ ಮತದಾರರು ಮತಗಟ್ಟೆಅಧಿಕಾರಿಗಳ ಗಮನಕ್ಕೆ ತಂದಲ್ಲಿ ಆ ಬಗ್ಗೆ ಸೂಕ್ತವಾಗಿ ಪರಿಶೀಲನೆ ನಡೆಸಿ ಟೆಂಡರ್‌ ಮತದಾನಕ್ಕೆ (ಅಸಲಿ ಮತದಾರರಿಗೆ ಅವಕಾಶ) ಅವಕಾಶ ನೀಡಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ.

28 ಕ್ಷೇತ್ರಗಳಿಗೆ 478 ಅಭ್ಯರ್ಥಿಗಳು ಫೈನಲ್: ಇಲ್ಲಿದೆ ಪಟ್ಟಿ!

Latest Videos

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸಲಿ ಮತದಾರರ ಹೆಸರು ಮತಪಟ್ಟಿಯಲ್ಲಿದ್ದು, ಬೇರೆಯವರು ಅವರ ಮತಚಲಾಯಿಸಿದರೆ ಮತಗಟ್ಟೆಅಧಿಕಾರಿಗಳಿಗೆ ಗಮನಕ್ಕೆ ತರಬೇಕು. ಆ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಒಂದು ವೇಳೆ ಅಸಲಿ ಮತದಾರರ ಹೆಸರಿಗೆ ನಕಲಿ ಮತದಾನ ಚಲಾಯಿಸಿದ್ದರೆ ಅಸಲಿ ಮತದಾರರಿಗೆ ಮತಚಲಾಯಿಸಲು ಅವಕಾಶ ನೀಡಲಾಗುತ್ತದೆ ಎಂದರು.

ಚುನಾವಣೆ ಗೆಲ್ಲಲು ಮೋದಿ ನಾಮಬಲವೊಂದಿದ್ದರೆ ಸಾಕೇ?

ಅಸಲಿ ಮತದಾರರಿಗೆ ಮತಯಂತ್ರದ ಮೂಲಕ ಮತ ಚಲಾಯಿಸಲು ಅವಕಾಶ ನೀಡುವುದಿಲ್ಲ. ಬದಲಿಗೆ ಮತಪತ್ರಗಳನ್ನು ನೀಡಿ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ. ಯಾವುದೇ ಮತಗಟ್ಟೆಯಲ್ಲಿ ಐದಕ್ಕಿಂತ ಹೆಚ್ಚು ಇಂತಹ ಪ್ರಕರಣಗಳು ನಡೆದರೆ ಅಂತಹ ಮತಗಟ್ಟೆಯಲ್ಲಿ ಮರುಮತದಾನಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

click me!