ಚುನಾವಣೆ ದಿನವೇ ಲಕ್ಷ್ಮೀ ಹೆಬ್ಬಾಳ್ಕರ್ ಮೇಲೆ ದೂರು ದಾಖಲು

By Web DeskFirst Published Apr 23, 2019, 6:59 PM IST
Highlights

ಮತದಾನ ಮಾಡಲು ಆಗಮಿಸಿದ ಶಾಸಕಿ ಚುವಾವಣೆ ದಿನ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪಕ್ಕೆ ಗುರಿಯಾಗಿದ್ದು ದೂರು ಸಹ ದಾಖಲಾಗಿದೆ. 

ಬೆಳಗಾವಿ(ಏ. 23)  ಮತದಾನದ ಕೇಂದ್ರದಲ್ಲಿಯೇ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡಲು ಮನವಿ ಮಾಡಿದ ಆರೋಪದ ಮೇಲೆ ಬೆಳಗಾವಿ ಗ್ರಾಮೀಣ ಶಾಸಕಿ  ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ನಗರದ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಚುನಾವಣಾ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.

ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದ ವಿಜಯ ನಗರದಲ್ಲಿ ತಮ್ಮ ಕುಟುಂಬಸ್ಥರೊಂದಿಗೆ ತೆರಳಿ ಮತದಾನ ಮಾಡಿದ ನಂತರ, ಕೇಂದ್ರದಲ್ಲಿ ಮತದಾನಕ್ಕೆ ಬಂದ ಜನರಿಗೆ ಕೈ ಮುಗಿಯುತ್ತಾ ಓಡಾಡಿದ್ದಾರೆ. ಅಲ್ಲದೇ ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಆಶೀರ್ವದಿಸುವಂತೆ ಮನವಿ ಮಾಡಿಕೊಳ್ಳುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎನ್ನಲಾಗಿದೆ.

ರಮೇಶ್ ರಾಜೀನಾಮೆ ಮಾತಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ಟ ಪ್ರತಿಕ್ರಿಯೆ

ಈ ಕುರಿತು ಮಾಧ್ಯಮಗಳಲ್ಲಿ ವರದಿ ಬಿತ್ತರವಾದ ತಕ್ಷಣ ಎಚ್ಚೆತ್ತ ಮಾಧ್ಯಮ ಕಣ್ಗಾವಲು ಕೇಂದ್ರದ ಪ್ಲಾಯಿಂಗ್ ಸ್ಕ್ವಾಡ್  ನಗರದ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ ಎಂದು ಕ್ಯಾಂಪ್ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

 

click me!