ನೀತಿ ಸಂಹಿತೆ ಉಲ್ಲಂಘನೆ: ಮೋದಿಗೆ ಕ್ಲಿನ್ ಚಿಟ್ ವಿರೋಧ!

By Web DeskFirst Published May 4, 2019, 4:01 PM IST
Highlights

ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ| ಪ್ರಧಾನಿ ಮೋದಿಗೆ ಕ್ಲಿನ್ ಚಿಟ್ ನೀಡಲು ಓರ್ವ ಆಯುಕ್ತರಿಂದ ವಿರೋಧ| ಪ್ರಧಾನಿ ಮೋದಿ-ಅಮಿತ್ ಶಾ ವಿರುದ್ಧ 5 ನೀತಿ ಸಂಹಿತೆ ಉಲ್ಲಂಘನೆ ಆರೋಪ| ಪ್ರಧಾನಿ ವಿರುದ್ಧ ಕ್ರಮ ಬಯಸಿದ್ದ ಓರ್ವ ಆಯುಕ್ತ| ಮೋದಿ-ಶಾ ವಿರುದ್ಧದ ದೂರುಗಳ ಕುರಿತು ಮೇ.6ರೊಳಗೆ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ಸೂಚನೆ|

ನವದೆಹಲಿ(ಮೇ.04): ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ, ಪ್ರಧಾನಿ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಲು ಚುನಾವಣಾ ಆಯೋಗದ ಓರ್ವ ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಬಾಲಾಕೋಟ್ ವಾಯುದಾಳಿ, ಅಲ್ಪಸಂಖ್ಯಾತ ಮತಕ್ಷೇತ್ರಕ್ಕೆ ರಾಹುಲ್ ಗಾಂಧಿ ಸ್ಪರ್ಧೆ ಹಾಗೂ ಪಾಕಿಸ್ತಾನದ ಮೇಲೆ ಅಣ್ವಸ್ತ್ರ ಬಳಕೆ ಕುರಿತ ಪ್ರಧಾನಿ ಹೇಳಿಕೆಗೆ ಚುನಾವಣಾ ಆಯೋಗ ಈಗಾಗಲೇ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿದೆ.

ಇವುಗಳ ಪೈಕಿ ಅಣ್ವಸ್ತ್ರಕ್ಕೆ ಸಂಬಂಧಿಸಿದ ಹೇಳಿಕೆ ಹೊರತುಪಡಿಸಿ ಉಳಿದ ಪ್ರಕರಣಗಳಲ್ಲಿ ಪ್ರಧಾನಿಗೆ ಕ್ಲೀನ್ ​ಚಿಟ್ ನೀಡಲು ಓರ್ವ ಆಯುಕ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಪ್ರಧಾನಿ ವಿರುದ್ಧ ಕ್ರಮ ಅಥವಾ ಎಚ್ಚರಿಕೆ ಸಂದೇಶ ನೀಡಬೇಕು ಎಂದು ಓರ್ವ ಆಯುಕ್ತರು ಬಯಸಿದ್ದರು ಎನ್ನಲಾಗಿದೆ.

ಪ್ರಧಾನಿ ವಿರುದ್ಧದ ಪ್ರಕರಣಗಳ ಕುರಿತು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಮತ್ತು ಚುನಾವಣಾ ಆಯುಕ್ತರಾದ ಅಶೋಕ್ ಲವಾಸ್ ಹಾಗೂ ಸುಶಿಲ್ ಚಂದ್ರ ನಿರ್ಧಾರ ಕೈಗೊಳ್ಳುತ್ತಾರೆ.

ಒಂದು ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರು ಹಾಗೂ ಆಯುಕ್ತರ ನಡುವೆ ಭಿನ್ನಾಭಿಪ್ರಾ ವ್ಯಕ್ತವಾದರೆ 2:1 ಬಹುಮತದ ಆಧಾರದ ಮೇಲೆ ಅಂತಿಮ ನಿರ್ಧಾರ ಪ್ರಕಟಿಸಲಾಗುತ್ತದೆ.

ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧದ ಎಲ್ಲ ದೂರುಗಳನ್ನು ಮೇ.6ರೊಳಗೆ ವಿಚಾರಣೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!