ನಿಜಾಮಾಬಾದ್‌ನಲ್ಲಿ 27000 ಇವಿಎಂ ಬಳಕೆ: ಗಿನ್ನೆಸ್‌ ದಾಖಲೆ?

By Web DeskFirst Published Apr 12, 2019, 9:20 AM IST
Highlights

ನಿಜಾಮಾಬಾದ್‌ ಲೋಕಸಭಾ ಕ್ಷೇತ್ರದಿಂದ 185 ಮಂದಿ ಅಭ್ಯರ್ಥಿಗಳ ಸ್ಪರ್ಧೆ| ಪ್ರತಿಯೊಂದು ಮತಗಟ್ಟೆಯಲ್ಲಿ 12 ಇವಿಎಂ| ಒಟ್ಟು 27000 ಇವಿಎಂ ಬಳಕೆ| ಗಿನ್ನೆಸ್‌ ದಾಖಲೆ ಸಾಧ್ಯತೆ

ಹೈದರಾಬಾದ್‌[ಏ.12]: ತೆಲಂಗಾಣದ ನಿಜಾಮಾಬಾದ್‌ ಲೋಕಸಭಾ ಕ್ಷೇತ್ರದಲ್ಲಿ ಅತಿಹೆಚ್ಚು ಇವಿಎಂಗಳನ್ನು ಬಳಸಿದ ಕಾರಣದಿಂದಾಗಿ ಗಿನ್ನೆಸ್‌ ವರ್ಲ್ಡ್ ರೆಕಾರ್ಡ್‌ ದಾಖಲೆಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ.

ನಿಜಾಮಾಬಾದ್‌ ಕ್ಷೇತ್ರದಿಂದ 185 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಪ್ರತಿಯೊಂದು ಮತಗಟ್ಟೆಯಲ್ಲಿ 12 ಇವಿಎಂ ಯಂತ್ರಗಳನ್ನು ಬಳಸಲಾಗಿದೆ. ಈ ಕ್ಷೇತ್ರದಲ್ಲಿ ಒಟ್ಟಾರೆ 27,000 ಇವಿಎಂ ಮತಯಂತ್ರಗಳನ್ನು ಬಳಕೆ ಮಾಡಲಾಗಿದೆ. ಒಂದು ಕ್ಷೇತ್ರದಲ್ಲಿ ಅತಿ ಹೆಚ್ಚು ಇವಿಎಂಗಳನ್ನು ಬಳಕೆ ಮಾಡಿದ್ದನ್ನು ದಾಖಲೆ ಎಂದು ಪರಿಗಣಿಸುವಂತೆ ಚುನಾವಣಾ ಆಯೋಗದ ಅಧಿಕಾರಿಗಳು ಗಿನ್ನೆಸ್‌ ಬುಕ್‌ ಆಫ್‌ ರೆಕಾರ್ಡ್‌ನ ಗಮನಕ್ಕೆ ತಂದಿದ್ದಾರೆ.

ಹೀಗಾಗಿ ಇದು ಗೆನ್ನೆಸ್‌ ದಾಖಲೆಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!