ಹಲ್ಲೆಗೊಳಗಾಗಿ ಕಣ್ಣೀರಿಟ್ಟ ಭಾರತಿ ಘೋಷ್ ವಿರುದ್ಧವೇ FIR!

Published : May 12, 2019, 05:48 PM IST
ಹಲ್ಲೆಗೊಳಗಾಗಿ ಕಣ್ಣೀರಿಟ್ಟ ಭಾರತಿ ಘೋಷ್ ವಿರುದ್ಧವೇ FIR!

ಸಾರಾಂಶ

ಹಲ್ಲೆಗೊಳಗಾದ ಬಿಜೆಪಿ ಅಭ್ಯರ್ಥಿ ವಿರುದ್ಧ ಎಫ್ಐಆರ್| ಪ.ಬಂಗಾಳ ಘಟಾಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್| ಮತಗಟ್ಟೆಯೊಳಗೆ ವಿಡಿಯೋ ಮಾಡಲು ಮುಂದಾದ ಆರೋಪ| ಮತಗಟ್ಟೆ ಸಮೀಪ ಟಿಎಂಸಿ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿದ್ದ ಭಾರತಿ ಘೋಷ್| ಎಫ್ಐಆರ್ ದಾಖಲಿಸಲು ಚುನಾವಣಾ ಆಯೋಗ ಸೂಚನೆ| 

ನವದೆಹಲಿ(ಮೇ.12): ಪಶ್ಚಿಮ ಬಂಗಾಳದಲ್ಲಿ ತಮ್ಮ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಲು ಯತ್ನಿಸಿದ್ದಾರೆಂದು ಕಣ್ಣೀರಿಟ್ಟಿದ್ದ ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್ ವಿರುದ್ಧ ಎಫ್ಐಆರ್ ದಾಖಲಿಸಲು ಚುನಾವಣಾ ಆಯೋಗ ಸೂಚನೆ ನೀಡಿದೆ. 

ಘಟಾಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್, ಮತಗಟ್ಟೆಯೊಳಗೆ ತಮ್ಮ ಭದ್ರತಾ ಸಿಬ್ಬಂದಿ ಕರೆದೊಯ್ದಿಲ್ಲದೇ ಮತಗಟ್ಟೆಯ ವಿಡಿಯೋ ಮಾಡಲು ಮುಂದಾದರು ಎಂಬ ಆರೋಪ ಕೇಳಿ ಬಂದಿದೆ.

ಇದರಿಂದ ರೊಚ್ಚಿಗೆದ್ದ ಟಿಎಂಸಿ ಕಾರ್ಯಕರ್ತರು, ಭಾರತಿ ಘೋಷ್ ಅವರನ್ನು ಮತಗಟ್ಟೆಯಿಂದ ಹೊರಗೆಳೆದು ಹಲ್ಲೆಗೆ ಯತ್ನಿಸಿದ್ದರು. ಸದ್ಯ ಭಾರತಿ ಘೋಷ್ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಪ್ರತಿಯಾಗಿ ಎಫ್ಐಆರ್ ದಾಖಲಿಸಲು ಚುನಾವಣಾ ಆಯೋಗ ಸೂಚನೆ ನೀಡಿದೆ. 

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!