ಕಳೆದ ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಶ್ರೀರಾಮುಲು ಹಾಕಿದ್ದ ಸವಾಲ್ ಅನ್ನು ಸಚಿವ ಡಿ.ಕೆ.ಶಿವಕುಮಾರ್ ನೆನಪಿಸಿ ವ್ಯಂಗ್ಯವಾಡಿದ್ದಾರೆ.
ಬಳ್ಳಾರಿ. (ಮಾ.24): ಗಡಿನಾಡು ಬಳ್ಳಾರಿ ಲೋಕಸಭಾ ಚುನಾವಣೆ ಕಾವು ರಂಗೇರಿದ್ದು, ಇಂದು (ಭಾನುವಾರ ರಣ ಬಿಸಿಲಿನಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ ಮಾಡಿತು.
ಬಳ್ಳಾರಿ ಸಂಡೂರು ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಅವರು ಅಣ್ಣ ಅಣ್ಣ ಎನ್ನುತ್ತಲೇ ಸೈಲೆಂಟ್ ಆಗಿ ಶ್ರೀರಾಮುಲು ಕಾಲೆಳೆದರು.
ಇದೇ ವೇಳೆ ಕಳೆದ ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ವೇಳೆ ಶ್ರೀರಾಮುಲು ಹಾಡಿದ ಮಾತುಗಳನ್ನು ನೆನಪಿಸಿ ಶ್ರೀರಾಮುಲುಗೆ ಟಾಂಗ್ ಕೊಟ್ಟಿದ್ದಾರೆ.
ಜೆ.ಶಾಂತ ದೆಹಲಿಗೆ ಹೋಗುತ್ತಾರೆ. ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗುವುದು ಖಚಿತ ಎಂದು ಶ್ರೀರಾಮು ಹೇಳಿದ್ದರು. ಅಂದಿನ ಮಾತನ್ನು ಇಂದು ಡಿಕೆಶಿ ಮೆಲುಕು ಹಾಕಿದ್ದು, 'ಅಕ್ಕ ದೆಹಲಿಗೆ ಹೋಗಲಿಲ್ಲ. ನಾನು ಜೈಲಿಗೆ ಹೋಗಲಿಲ್ಲ. ಶ್ರೀರಾಮುಲು ಅಣ್ಣ ಗಮನಿಸಿ ಎಂದು ವ್ಯಂಗ್ಯವಾಡಿದರು.