ಬಿಎಸ್‌ವೈ ಕೇಂದ್ರ ಮಂತ್ರಿಯಾಗದ್ದಕ್ಕೆ ಬೇಜಾರು ಮಾಡಿಕೊಂಡ ಡಿಕೆಶಿ

Published : Mar 30, 2019, 11:15 PM ISTUpdated : Mar 30, 2019, 11:24 PM IST
ಬಿಎಸ್‌ವೈ ಕೇಂದ್ರ ಮಂತ್ರಿಯಾಗದ್ದಕ್ಕೆ ಬೇಜಾರು ಮಾಡಿಕೊಂಡ ಡಿಕೆಶಿ

ಸಾರಾಂಶ

ಬೇಡಿಕೆಯ ಪ್ರಚಾರಕ ಡಿಕೆ ಶಿವಕುಮಾರ್ ಶಿವಮೊಗ್ಗದಲ್ಲಿ ದೋಸ್ತಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಪ್ರಚಾರ ಮಾಡಿದರು. ಮತಯಾಚನೆ ಮಾಡಿದ್ದಲ್ಲದೆ ಬಿಎಸ್ ಯಡಿಯೂರಪ್ಪ ಮತ್ತು ರಾಘವೇಂದ್ರ ಅವರಿಗೆ ಟಾಂಗ್ ನೀಡಿದರು.

ಶಿವಮೊಗ್ಗ[ಮಾ. 30]  ನಿಮ್ಮನ್ನು ನಂಬಿ ಬಂದಿದ್ದೇನೆ. ರಂಭಾಪುರಿಯಲ್ಲಿ ದಸರಾ ದರ್ಭಾರ್ ನಡೆಯುತ್ತಾ ಇತ್ತು ಆಗ ನಾನು ಸರ್ಕಾರದಲ್ಲಿ ಇದ್ದೆ ನಾನೊಂದು ತಪ್ಪು ಮಾಡಿದ್ದೇವೆ ನನ್ನನ್ನು ಕ್ಷಮಿಸಿ ಎಂದು ಕೇಳಿದ್ದೆ. ಧರ್ಮದಲ್ಲಿ ರಾಜಕೀಯ ಇರಬಾರದು ರಾಜಕೀಯ ದಲ್ಲಿ ಧರ್ಮ ಇರಬೇಕು ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದರು.

ಭದ್ರಾವತಿಯಲ್ಲಿ ದೋಸ್ತಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಪ್ರಚಾರ ಮಾಡಿದ ಡಿಕೆಶಿ, ಅಕ್ಕಿ  ಮತ್ತು ಅರಿಶಿನ ಸೇರಿ ಮಂತ್ರಾಕ್ಷತೆ ಆಗುತ್ತೆ.  ಗಂಡು ಮತ್ತು ಹೆಣ್ಣು  ಸೇರಿ ಮದುವೆ ಹೀಗೆ ರಾಜಕಾರಣಿಗಳು ಜನರ ಸೇವೆಯನ್ನು ಧರ್ಮದಿಂದ ಮಾಡಬೇಕು ಎಂದು ಶ್ಲೋಕದಿಂದಲೇ ಭಾಷಣ ಆರಂಭಿಸಿದರು.

ಮಗನ ನಾಮಪತ್ರ ಸಲ್ಲಿಕೆಗೆ ಬಾರದ ಬಿಎಸ್ ವೈ

ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಜೊತೆಗೂಡಿ ಕೆಲಸ ಮಾಡಿ ಮಧು ಗೆಲ್ಲಿಸಿ. ನನಗೆ ಯಡಿಯೂರಪ್ಪ ಮತ್ತು ರಾಘವೇಂದ್ರ ಮೇಲೆ ಬೇಜಾರಿಲ್ಲ. ನನಗೆ ಬಿಜೆಪಿ ರಾಷ್ಟ್ರೀಯ ನಾಯಕರ ಮೇಲೆ ಬೇಜಾರಿದೆ. ಬಿಜೆಪಿಯ ರಾಷ್ಟ್ರೀಯ ನಾಯಕರು ಯಡಿಯೂರಪ್ಪ ನವರನ್ನು ಮಂತ್ರಿ ಮಾಡಬಹುದಿತ್ತು. ರಾಘವೇಂದ್ರ ನನ್ನ ತಮ್ಮ ಅವನು ಇಲ್ಲೆ ಇರಲಿ,‌ ಯಡಿಯೂರಪ್ಪ ವಿಪಕ್ಷ ನಾಯಕ ಸ್ಥಾನದಲ್ಲೇ ಇರಲಿ, ನಾನು ಐದು ವರ್ಷ ಮಂತ್ರಿ ಯಾಗಿ ಇರುತ್ತೇನೆ. ಅದಕ್ಕಾಗಿ ಮಧು ಗೆಲ್ಲಿಸಿ ಎಂದು ಟಾಂಗ್ ನೀಡಿದರು.

ಕಳೆದುಕೊಂಡ ಜಾಗದಲ್ಲೇ ಹುಡುಕಬೇಕು.  ಕುಮಾರ ಬಂಗಾರಪ್ಪ ಆಗಲಿ , ಮಧು ಬಂಗಾರಪ್ಪ ಆಗಲಿ ಬಂಗಾರಪ್ಪ ಆಗಲು ಸಾಧ್ಯವಿಲ್ಲ ಬಿಡಿ. ಉಳಿಯಿಂದ ಎಟು ತಿಂದು ಸಾಕಷ್ಟು ಅನುಭವಿಸಿದ್ದು ಈ ಬಾರಿ ನೀವು ಗೆಲ್ಲಿಸಿ ಬಿಜೆಪಿಯವರು ಹಿಂದೂಗಳು ಎನ್ನುತ್ತಾರೆ ನಾವೇನೂ ಬೇರೆಯವರಾ? ಅದ್ರೆ ನಾವು ಮುಸ್ಲಿಂ, ಕ್ರಿಶ್ಚಿಯನ್, ಮೊದಲಾದವರು ಸೇರಿ ಹಿಂದೂ ಎನ್ನುತ್ತೇವೆ ಎಂದು ವಿಶ್ಲೇಷಣೆ ಮಾಡಿದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!