
ಬೆಳಗಾವಿ[ಮಾ.25]: ಬಿಜೆಪಿಯಿಂದ ಹಾಲಿ ಸಂಸದ ಸುರೇಶ್ ಅಂಗಡಿ ಹಾಗೂ ಕಾಂಗ್ರೆಸ್‌ನಿಂದ ಡಾ.ವಿರೂಪಾಕ್ಷ ಎಸ್. ಸಾಧುನವರ ಸ್ಪರ್ಧಿಸುತ್ತಿದ್ದಾರೆ.
ಬೆಳಗಾವಿ ಕೇತ್ರದಲ್ಲಿ ಕಗ್ಗಂಟಾಗಿದ್ದ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಹಲವು ದಿನಗಳನ್ನು ತಳ್ಳಿಕೊಂಡು ಬಂದಿದ್ದ ಕಾಂಗ್ರೆಸ್ ಕೊನೆಗೆ ಶನಿವಾರ ತನ್ನ ಅಧಿಕೃತ ಹುರಿಯಾಳು ಬೈಲಹೊಂಗಲದ ಡಾ.ವಿರೂಪಾಕ್ಷ ಎಸ್. ಸಾಧುನವರ ಎಂದು ಘೋಷಣೆ ಮಾಡಿದೆ.
ನರೇಂದ್ರ ಮೋದಿ ಅಲೆ ಹಾಗೂ ಬಿಜೆಪಿ ಪ್ರಬಲವಾಗಿರುವ ಈ ಕ್ಷೇತ್ರದಲ್ಲಿ ಹೊಸಬ ಡಾ. ವಿರೂಪಾಕ್ಷ ಹೇಗೆ ಪೈಪೋಟಿ ನೀಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...