ರಕ್ಷಣಾ ಒಪ್ಪಂದಗಳು ಕಾಂಗ್ರೆಸ್‌ಗೆ ಎಟಿಎಂ: ಮೋದಿ

By Web DeskFirst Published May 14, 2019, 11:24 AM IST
Highlights

ರಕ್ಷಣಾ ಒಪ್ಪಂದಗಳು ಕಾಂಗ್ರೆಸ್‌ಗೆ ಎಟಿಎಂ| ಕಾಂಗ್ರೆಸ್‌ ಉದ್ದೇಶಪೂರ್ವಕವಾಗಿಯೇ ವಿದೇಶಿ ಭದ್ರತಾ ಸಾಮಗ್ರಿಗಳ ಮೇಲೆ ಭಾರತ ಅವಲಂಬನೆಯಾಗುವಂತೆ ನೋಡಿಕೊಂಡಿತ್ತು: ಮೋದಿ

ಸೋಲನ್‌(ಮೇ.14): ಇತ್ತೀಚೆಗಷ್ಟೇ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರು ಪ್ರಧಾನಿಯಾಗಿದ್ದ ವೇಳೆ ಐಎನ್‌ಎಸ್‌ ವಿರಾಟ್‌ ಅನ್ನು ತಮ್ಮ ಖಾಸಗಿ ಟ್ಯಾಕ್ಸಿ ಆಗಿ ಬಳಸಿಕೊಂಡಿದ್ದರು ಎಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಇದೀಗ ಕಾಂಗ್ರೆಸ್‌ ಸರ್ಕಾರಗಳು ಯುದ್ಧೋಪಕರಣ ಒಪ್ಪಂದಗಳನ್ನು ತನ್ನ ಎಟಿಎಂ ಆಗಿ ಬಳಸಿಕೊಳ್ಳುತ್ತಿದ್ದವು ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಹಿಮಾಚಲ ಪ್ರದೇಶದ ಸೋಲನ್‌ ಜಿಲ್ಲೆಯಲ್ಲಿ ಬಿಜೆಪಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ ಅವರು, ‘ಕಳೆದ 70 ವರ್ಷಗಳ ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಭಾರತಕ್ಕೆ ಅಗತ್ಯವಿರುವ ಭದ್ರತಾ ಸಾಮಗ್ರಿಗಳಿಗಾಗಿ ವಿದೇಶಗಳ ಮೇಲೆ ಅವಲಂಬನೆಯಾಗಿತ್ತು. ಯುದ್ಧೋಪಕರಣ ಖರೀದಿಗಳ ಒಪ್ಪಂದಗಳನ್ನು ಕಾಂಗ್ರೆಸ್‌ ತನ್ನ ಎಟಿಎಂನಂತೆ ಬಳಸುತ್ತಿತ್ತು. ಇದೇ ಕಾರಣಕ್ಕಾಗಿ ಕಾಂಗ್ರೆಸ್‌ ಉದ್ದೇಶಪೂರ್ವಕವಾಗಿಯೇ ವಿದೇಶಿ ಭದ್ರತಾ ಸಾಮಗ್ರಿಗಳ ಮೇಲೆ ಭಾರತ ಅವಲಂಬನೆಯಾಗುವಂತೆ ನೋಡಿಕೊಂಡಿತ್ತು,’ ಎಂದು ನುಡಿದರು.

ಅಲ್ಲದೆ, ‘1947ರಲ್ಲಿ ಬ್ರಿಟಿಷರ ದಾಸ್ಯದಿಂದ ಹೊರಬಂದಾಗ ಭದ್ರತಾ ಸಾಮಗ್ರಿಗಳ ಉತ್ಪಾದನೆಯಲ್ಲಿ ಭಾರತಕ್ಕೆ 150 ವರ್ಷಗಳ ಇತಿಹಾಸವಿತ್ತು. ಆದರೆ, ಚೀನಾಕ್ಕೆ ಇಂಥ ಯಾವುದೇ ಹಿನ್ನೆಲೆ ಇರಲಿಲ್ಲ. ಆದರೆ, ಚೀನಾ ಯುದ್ಧೋಪಕರಣಗಳ ರಫ್ತು ರಾಷ್ಟ್ರವಾಗಿ ಬದಲಾಗಿದೆ. ಆದರೆ, ಈ ಹಿಂದಿನ ಸರ್ಕಾರಗಳ ಕೆಟ್ಟಯೋಜನೆಗಳಿಂದಾಗಿ ಭಾರತ ಇನ್ನೂ ಯುದ್ಧೋಪಕರಣಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಆದರೆ, ಕಳೆದ ಐದು ವರ್ಷಗಳ ಆಡಳಿತಾವಧಿಯಲ್ಲಿ ಈ ಟ್ರೆಂಡ್‌ ಅನ್ನು ಉಲ್ಟಾ ಆಗಿಸಲು ಬಿಜೆಪಿ ಯತ್ನಿಸುತ್ತಿದೆ. ಇದಕ್ಕೆ ಪೂರಕವೆಂಬಂತೆ ಯುದ್ಧೋಪಕರಣಗಳ ಉತ್ಪಾದನೆ ಶೇ.80ರಷ್ಟುಹೆಚ್ಚಿದೆ,’ ಎಂದರು ಮೋದಿ.

click me!