ದೀದಿ ಫೋಟೋ ತಿರುಚಿದ್ದ ಬಿಜೆಪಿ ನಾಯಕಿ 14 ದಿನ ನ್ಯಾಯಾಂಗ ವಶಕ್ಕೆ

Published : May 14, 2019, 09:47 AM IST
ದೀದಿ ಫೋಟೋ ತಿರುಚಿದ್ದ ಬಿಜೆಪಿ ನಾಯಕಿ 14 ದಿನ ನ್ಯಾಯಾಂಗ ವಶಕ್ಕೆ

ಸಾರಾಂಶ

 ಪ್ರಿಯಾಂಕಾ ಛೋಪ್ರಾ ಅವರ ಹೊಸ ಹೇರ್‌ಸ್ಟೈಲ್‌ ಹಾಗೂ ಹೊಸ ವಿನ್ಯಾಸದ ಉಡುಗೆಗಳೊಂದಿಗೆ ದೀದೀ ಫೋಟೋ| ಫೋಟೋ ತಿರುಚಿದ್ದ ಬಿಜೆಪಿ ನಾಯಕಿ 14 ದಿನ ನ್ಯಾಯಾಂಗ ವಶಕ್ಕೆ

ಕೋಲ್ಕತಾ[ಮೇ.14]: ನಟಿ ಪ್ರಿಯಾಂಕಾ ಛೋಪ್ರಾ ಅವರ ಹೊಸ ಹೇರ್‌ಸ್ಟೈಲ್‌ ಹಾಗೂ ಹೊಸ ವಿನ್ಯಾಸದ ಉಡುಗೆಗಳನ್ನು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಧರಿಸಿರುವಂತೆ ತಿರುಚಿದ್ದ ಫೋಟೋ ಶೇರ್‌ ಮಾಡಿದ ಬಿಜೆಪಿ ಯುವ ಮೋರ್ಚಾ ನಾಯಕಿ ಪ್ರಿಯಾಂಕಾ ಶರ್ಮಾಗೆ ಇಲ್ಲಿನ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.

ಏತನ್ಮಧ್ಯೆ, ತಮ್ಮನ್ನು ಬಂಧಿಸಿದ ಪಶ್ಚಿಮ ಬಂಗಾಳ ಸರ್ಕಾರದ ಕ್ರಮ ಪ್ರಶ್ನಿಸಿ ಪ್ರಿಯಾಂಕಾ ಶರ್ಮಾ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದು, ಈ ಕುರಿತಾದ ಅರ್ಜಿ ಮಂಗಳವಾರ ವಿಚಾರಣೆಗೆ ಬರಲಿದೆ. ರಾಜ್ಯದಲ್ಲಿ ನಡೆಯುತ್ತಿರುವ ವಕೀಲರ ಪ್ರತಿಭಟನೆಯಿಂದಾಗಿ ಪಶ್ಚಿಮ ಬಂಗಾಳದಲ್ಲಿ ಕಾನೂನು ಪ್ರಕ್ರಿಯೆಗಳು ಸ್ಥಗಿತಗೊಂಡಿವೆ.

ಹೀಗಾಗಿ, ಶರ್ಮಾ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸದೆ ಬೇರೆ ಹಾದಿಯಿಲ್ಲ. ಈ ಅರ್ಜಿಯನ್ನು ತ್ವರಿತ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಶರ್ಮಾ ಅವರ ವಕೀಲರು ವಾದಿಸಿದ್ದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!