'ದೇವೇಗೌಡ್ರನ್ನ ಸಿದ್ದರಾಮಯ್ಯ ಸೋಲಿಸ್ತಾರೆ, ಮೈಸೂರಿನಲ್ಲಿ ಸಿದ್ದು ಆಪ್ತನನನ್ನ ಗೌಡ್ರು ಸೋಲಿಸ್ತಾರೆ'

Published : Mar 31, 2019, 06:20 PM ISTUpdated : Mar 31, 2019, 08:36 PM IST
'ದೇವೇಗೌಡ್ರನ್ನ ಸಿದ್ದರಾಮಯ್ಯ ಸೋಲಿಸ್ತಾರೆ, ಮೈಸೂರಿನಲ್ಲಿ ಸಿದ್ದು ಆಪ್ತನನನ್ನ ಗೌಡ್ರು ಸೋಲಿಸ್ತಾರೆ'

ಸಾರಾಂಶ

ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಬಗ್ಗೆ ವ್ಯಂಗ್ಯವಾಡಿದ್ದಾರೆ. ಅದರಲ್ಲೂ ಸಿದ್ದರಾಮಯ್ಯ ಹಾಗೂ ದೇವೇಗೌಡ ಅವರ ಬಗ್ಗೆ ಹೇಳಿದ್ದು ಹೀಗೆ.

ಕೊಪ್ಪಳ, [ಮಾ.31]: ತುಮಕೂರಿನಲ್ಲಿ ದೇವೇಗೌಡ್ರನ್ನು ಸಿದ್ದರಾಮಯ್ಯ ಸೋಲಿಸಲಿದ್ದಾರೆ. ಅತ್ತ ಮೈಸೂರಿನಲ್ಲಿ ಸಿದ್ದರಾಮಯ್ಯ ಆಪ್ತನನ್ನು ದೇವೇಗೌಡ್ರು ಸೋಲಿಸಲಿದ್ದಾರೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಹೇಳಿದ್ದಾರೆ.

ಕೊಪ್ಪಳದ ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, 'ಹೆಚ್ಡಿಡಿ ಕುಟುಂಬಕ್ಕೆ ಮಂಡ್ಯ ,ಹಾಸನ,ತುಮಕೂರು ಕ್ಷೇತ್ರಗಳೇ ದೇಶವಾಗಿದೆ. ಸ್ವತಃ ಸಿದ್ದರಾಮಯ್ಯನವರೇ ದೇವೆಗೌಡ್ರನ್ನು ಸೋಲಿಸಲು ನೇತೃತ್ವ ತೆಗೆದುಕೊಂಡಿದ್ದಾರೆ. ನೇರವಾಗಿಯೇ ಕಾಂಗ್ರೆಸ್ ನವರು ಬಿಜೆಪಿಗೆ ಸಪೋರ್ಟ್ ಮಾಡ್ತಾರೆ. ಇನ್ನು ಕೆಲವರು ಒಳಗೊಳಗೆ ಬಿಜೆಪಿಗೆ ಬೆಂಬಲ ನೀಡುತ್ತಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಲು ಕಾಂಗ್ರೆಸ್ ನಾಯಕರೇ ಬಿಡಲ್ಲ. ನಿಖಿಲ್ ಕುಮಾರಸ್ವಾಮಿ ಸೋಲು ನಿಶ್ಚಿತ ಎಂದು ಭವಿಷ್ಯ ನುಡಿದ ಈಶ್ವರಪ್ಪ, ಕುಮಾರಸ್ವಾಮಿಗೆ ಸೋಲಿನ ಭಯ ಕಾಡುತ್ತಿರುವುದರಿಂದ ರಾಜ್ಯವನ್ನ ಬಿಟ್ಟು ಮಂಡ್ಯದಲ್ಲಿ ಸಿಮೀತವಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಚಿಕ್ಕೋಡಿ ಬಿಜೆಪಿಯಲ್ಲಿ ಅಸಮಾಧನ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಉಮೇಶ‌ ಕತ್ತಿಯವರ ಜೊತೆ ಮಾತನಾಡಿದ್ದೇವೆ.ಅವರು ಯಾವುದೇ ಕಾರಣಕ್ಕೂ ಪಕ್ಷ ಬೀಡಲ್ಲ ಎಂದು ಹೇಳಿದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!