ರಾಹುಲ್ ಸಮಾವೇಶ: ಟ್ರಾಫಿಕ್ ಜಾಮ್, ತುಮಕೂರು ರಸ್ತೆಗೆ ಸದ್ಯ ಬರಬೇಡಿ

Published : Mar 31, 2019, 04:57 PM ISTUpdated : Mar 31, 2019, 05:12 PM IST
ರಾಹುಲ್ ಸಮಾವೇಶ: ಟ್ರಾಫಿಕ್ ಜಾಮ್, ತುಮಕೂರು ರಸ್ತೆಗೆ ಸದ್ಯ ಬರಬೇಡಿ

ಸಾರಾಂಶ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಮಾವೇಶದ ಕಾರಣಕ್ಕೆ  ಟ್ರಾಫಿಕ್ ಜಾಮ್ ಆಕಗಿದ್ದು ತುಮಕೂರು ರಸ್ತೆಯಲ್ಲಿ ಸವಾವರರು ಪರದಾಡುತ್ತಿದ್ದಾರೆ.

ಬೆಂಗಳೂರು(ಮಾ. 3231  ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪರ್ವದ ಪರಿವರ್ತನಾ ಸಮಾವೇಶ  ಸಂಜೆ 4 ಗಂಟೆಗೆ ಬೆಂಗಳೂರು ಹೊರವಲದ ಮಾದವಾರದ ಬಿಐಇಸಿ ಮೈದಾನ ನೈಸ್ ಜಂಕ್ಷನ್ ನಲ್ಲಿ ನಡೆಯಲಿದ್ದು ವಿವಿಧ ಕಡೆಯಿಂದ ಜನರು ಆಗಮಿಸುತ್ತಿದ್ದು ಟ್ರಾಫಿಕ್ ಜಾಮ್ ಆಗಿದೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಸೇರಿದಂತೆ ಮೈತ್ರಿ ಪಕ್ಷಗಳ ಮುಖಂಡರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗಮನದ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ರಾಹುಲ್ ಗಾಂಧಿಗೆ 10 ಪ್ರಶ್ನೆ ಕೇಳಿ ಕಾಲೆಳೆದ ಬಿಜೆಪಿ

ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು ವಾಹನ ಸವಾರರು ಹರಸಾಹಸ ಪಡಬೇಕಾಗಿದೆ. ಮಾರ್ಗದ ಉದ್ದಕ್ಕೂ ಟ್ರಾಫಿಕ್ ಜಾಮ್ ಆಗಿದ್ದು ಸಂಜೆಯವರೆಗೆ ಈ ಮಾರ್ಗದ ಬದಲು ಬೇರೆ ರಸ್ತೆ ಬಳಸುವುದು ಉತ್ತಮ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!