ಬಿಜೆಪಿ ಮೊದಲ ಪಟ್ಟಿ : 25 ಹಾಲಿ ಸಂಸದರಿಗೆ ಕೈ ತಪ್ಪಿದ ಟಿಕೆಟ್

Published : Mar 22, 2019, 02:08 PM IST
ಬಿಜೆಪಿ ಮೊದಲ ಪಟ್ಟಿ :  25 ಹಾಲಿ ಸಂಸದರಿಗೆ ಕೈ ತಪ್ಪಿದ ಟಿಕೆಟ್

ಸಾರಾಂಶ

ಲೋಕಸಭಾ ಚುನಾವಣೆ ಸಮೀಪಿಸಿದ್ದು ಬಿಜೆಪಿ ತಮ್ಮ ಮೊದಲ ಪಟ್ಟಿ ರಿಲೀಸ್ ಮಾಡಿದೆ. ಇದೇ ವೇಳೆ 25 ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಿದೆ. 

ನವದೆಹಲಿ :  ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ.  ಈಗಾಗಲೇ ಬಿಜೆಪಿ ತಮ್ಮ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. 

ಮೊದಲ ಪಟ್ಟಿಯಲ್ಲಿ ಕರ್ನಾಟಕದ 21, ಬಂಗಾಳದ 28, ಮಹಾರಾಷ್ಟ್ರದ 16 ಅಭ್ಯರ್ಥಿಗಳು ಸೇರಿ 184 ಅಭ್ಯರ್ಥಿಗಳ ಘೋಷಣೆಯಾಗಿದೆ. ಇವರಲ್ಲಿ ಛತ್ತೀಸ್‌ಗಢದ 5 ಸಂಸದರು, ಎಲ್.ಕೆ. ಅಡ್ವಾಣಿ ಸೇರಿ 25 ಹಾಲಿ ಸಂಸದರಿಗೆ ಟಿಕೆಟ್ ಲಭ್ಯವಾಗಿಲ್ಲ. 

ಮಾಜಿ ಕೇಂದ್ರ ಸಚಿವ ರಾಮ್‌ಶಂಕರ್ ಕಠೇರಿಯಾ, ಉತ್ತರಾಖಂಡ ಮಾಜಿ ಸಿಎಂಗಳಾದ ಬಿ.ಸಿ. ಖಂಡೂರಿ ಹಾಗೂ ಭಗತ್ ಸಿಂಗ್ ಕೋಶಿಯಾರಿ ಅವರಿಗೂ ಟಿಕೆಟ್ ಲಭ್ಯವಾಗಿಲ್ಲ.

ಅಲ್ಲದೇ ಕೇಂದ್ರ ಸಚಿವ ಉತ್ತರ ಪ್ರದೇಶ ಮೂಲದ ಕೃಷ್ಣ ರಾಜ್ ಅವರಿಗೂ ಕೂಡ ಮೊದಲ ಪಟ್ಟಿಯಲ್ಲಿ ಟಿಕೆಟ್ ಕೈ ತಪ್ಪಿದೆ. 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!