'ಕಾಂಗ್ರೆಸ್ ಪಕ್ಷ ಇರುವುದಕ್ಕಿಂತ ಸಾಯುವುದೇ ಲೇಸು'

By Web DeskFirst Published May 20, 2019, 4:04 PM IST
Highlights

ಹಲವು ಮಾಧ್ಯಮ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆ ಪ್ರಕಟ ಮಾಡುತ್ತಿದ್ದಂತೆಯೇ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.  ಕಾಂಗ್ರೆಸ್ ಇರುವುದಕ್ಕಿಂತ ಸಾಯುವುದೇ ಲೇಸು ಎಂದು ಸ್ವರಾಜ್ ಇಂಡಿಯಾ ಮುಖ್ಯಸ್ಥ  ಯೋಗೇಂದ್ರ ಯಾದವ್ ಟ್ವೀಟ್ ಮಾಡಿದ್ದಾರೆ.

ನವದೆಹಲಿ(ಮೇ. 20)  ಬಿಜೆಪಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟ ಕೇಂದ್ರದಲ್ಲಿ ಮತ್ತೆ ಅಧಿಕಾರ ಹಿಡಿಯಲಿದೆ ಎಂಬ ಚುನಾವಣೋತ್ತರ ಸಮೀಕ್ಷೆ ಹೇಳಿದಂತೆ ರಾಜಕೀಯ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  ಕಾಂಗ್ರೆಸ್ ಪಕ್ಷ ಸಾಯಲೇಬೇಕು ಎಂದು ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ಟ್ವೀಟ್ ಮಾಡಿರುವುದು ಸುದ್ದಿಯಾಗಿದೆ.

ಅಭಿಷೇಕ್ ಚಿತ್ರದಲ್ಲಿ ಭಿಕ್ಷುಕನ ಪಾತ್ರ ಮಾಡಲು ರಜನಿಕಾಂತ್ ಸೈ!

ಭಾರತದ ಇತಿಹಾಸದಲ್ಲಿ ಕಾಂಗ್ರೆಸ್ ಒಳ್ಳೆಯ ಪಾತ್ರವೇ ಇಲ್ಲ, ದೇಶವನ್ನು ಬಿಜೆಪಿಯಿಂದ ರಕ್ಷಿಸಲು ಸಾಧ್ಯವಾದ ಕಾಂಗ್ರೆಸ್ ಗೆ ಸಾಯುವುದೊಂದೆ ದಾರಿ ಎಂದು ಕಾಂಗ್ರೆಸ್ ಖಂಡಿತ ಸಾಯಬೇಕು ಎಂದು ಯೋಗೇಂದ್ರ ಯಾದವ್ ಟ್ವೀಟ್ ಮಾಡಿದ್ದಾರೆ.

ಚಾಣಕ್ಯ, ಸಿ-ವೋಟರ್, ಟೈಮ್ಸ್ ನೌ ಸೇರಿದಂತೆ 10ಕ್ಕೂ ಹೆಚ್ಚು ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಕಟಗೊಳಿಸಿದ್ದು, ಬಹುತೇಕ ಎಲ್ಲ ಸಮೀಕ್ಷೆಗಳಲ್ಲೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಮತ್ತೆ ಅಧಿಕಾರದತ್ತ ದಾಪುಗಾಲಿರಿಸುವ ಸಾಧ್ಯತೆ ಎಂದು ಹೇಳಲಾಗಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

 

The Congress must die.
If it could not stop the BJP in this election to save the idea of India, this party has no positive role in Indian history. Today it represents the single biggest obstacle to creation of an alternative.

My reaction to https://t.co/IwlmBmf75d

— Yogendra Yadav (@_YogendraYadav)
click me!