ಲೋಕಸಭಾ ಚುನಾವಣೆ: ಕಾಂಗ್ರೆಸ್ ಆಫರ್‌ಗೆ ಮನಮೋಹನ್ ಸಿಂಗ್ ಸೈಲೆಂಟ್

Published : Mar 11, 2019, 03:52 PM IST
ಲೋಕಸಭಾ ಚುನಾವಣೆ: ಕಾಂಗ್ರೆಸ್ ಆಫರ್‌ಗೆ ಮನಮೋಹನ್ ಸಿಂಗ್ ಸೈಲೆಂಟ್

ಸಾರಾಂಶ

ಮನಮೋಹನ್ ಸಿಂಗ್‌ಗೆ ಆಫರ್ ಕೊಟ್ಟ ಕಾಂಗ್ರೆಸ್| ಆಫರ್‌ಗೆ  ಮನಮೋಹನ್ ಸಿಂಗ್‌ ಫುಲ್ ಸೈಲೆಂಟ್| ಏನದು ಆಫರ್..?

ನವದೆಹಲಿ, (ಮಾ.11): ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಚುನಾವಣಾ ಅಖಾಡಕ್ಕಿಳಿಸಲು ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದೆ.

ಸಿಖ್ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್, ಮನಮೋಹನ್ ಸಿಂಗ್ ಅವರನ್ನು ಪಂಜಾಬ್ ನ ಅಮೃತಸರ ಕ್ಷೇತ್ರದಿಂದ ಕಣಕ್ಕಿಳಿಸಲು ಚಿಂತನೆ ನಡೆಸಿದೆ.

ಆದ್ರೆ, ಈ ಬಗ್ಗೆ ಖುದ್ದು ಮನಮೋಹನ್ ಸಿಂಗ್ ಅವರು ಯಾವುದೇ ಪ್ರತಿಕ್ರಿಯಿಸದೇ ಇರುವುದು ಕಾಂಗ್ರೆಸ್‌ಗೆ ನಿರಾಸೆ ಮೂಡಿಸಿದೆ.  

 ಸಿಖ್ ಸಮುದಾಯದ ಹಿರಿಯ ನಾಯಕರಾಗಿರುವ ಮನಮೋಹನ್ ಸಿಂಗ್ ಅವರು ಈವರೆಗೂ ಮತದಾರರಿಂದ ಆಯ್ಕೆಯಾಗುವ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ.ಬದಲಾಗಿ ಬೇರೆ-ಬೇರೆ ರಾಜ್ಯಗಳ ಮೂಲಕ ರಾಜ್ಯಸಭೆಗೆ  ಆಯ್ಕೆಯಾಗಿದ್ದಾರೆ. 

 86 ವರ್ಷದ ಮನಮೋಹನ್ ಸಿಂಗ್ ಈ ಬಗ್ಗೆ ಆಸಕ್ತಿಯನ್ನೂ ತೋರಿಲ್ಲ, ಮನಮೋಹನ್‌ಸಿಂಗ್ ಅವರು 1991ರಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತಾ ಬಂದಿದ್ದಾರೆ. 

ಕೊನೆಗಳಿಗೆಯಲ್ಲಿ ಮನಮೋಹನ್ ಸಿಂಗ್ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!