‘ಧರ್ಮ ಪ್ರತ್ಯೇಕ ಮಾಡಲು ಹೋಗಿದ್ದಕ್ಕೆ ಜನ ಕಪಾಲಕ್ಕೆ ಹೊಡೆದ್ರು’

By Web Desk  |  First Published Apr 8, 2019, 10:34 PM IST

ಡಿಕೆ ಶಿವಕುಮಾರ್ ಬಳ್ಳಾರಿಯಲ್ಲಿ ಮಾತನಾಡಿದ್ದಾರೆ. ರಾಮ ಮಂದಿರ ವಿಚಾರ ಇಟ್ಟುಕೊಂಡು ಬಿಜೆಪಿ ಮೇಲೆ ವಾಗ್ದಾಳಿ ಮಾಡಿದ್ದಾರೆ.


ಬಳ್ಳಾರಿ[ಏ. 08]  ನಾವು ಹಿಂದುಗಳೇ, ನಮ್ಮ ಹೆಸರಿನಲ್ಲೇ ದೇವರ ಹೆಸರುಗಳಿವೆ. ನಾನು ಶಿವಕುಮಾರ, ಸಂಸದ ಉಗ್ರಂ ವೀರಂ ಉಗ್ರಪ್ಪ,. ಸಚಿವ ಪರಮೇಶ್ವರ್‌ನಾಯಕ್  ನಾವೆಲ್ಲ ದೇವರ ಹೆಸರು ಇಟ್ಟುಕೊಂಡವರು. ನಾವೆಲ್ಲ ಹಿಂದೂಗಳಲ್ಲವೇ? ಎಂದು ಸಚಿವ ಡಿಕೆ ಶಿವಕುಮಾರ ಪ್ರಶ್ನೆ ಮಾಡಿದ್ದಾರೆ.

ರಾಮನ ನಾಮ ಹೈಜಾಕ್ ಮಾಡಲು ನಾವು ಬಿಡುವುದಿಲ್ಲ. ರಾಹುಲ್‌ ಗಾಂಧಿ ನಮಗೆ ದೀಕ್ಷೆ‌ ಕೊಟ್ಟಿದ್ದಾರೆ.  ರಾಷ್ಟ್ರದ ಧ್ವಜ, ನಮ್ಮ ಧರ್ಮ ಗೌರವ ಕೊಡಬೇಕು. ಬಿಜೆಪಿಯವರು ಹಿಂದು ಎನ್ನುತ್ತಾರೆ. ನಾವೆಲ್ಲ ಮುಂದು ಎಲ್ಲ ಸಮುದಾಯ ಒಳಗೊಂಡವರು. ಲಿಂಗಾಯತ ವೀರಶೈವ ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂಧಿಸಿ  ನಾನು ಈಗಾಗಲೇ ಕ್ಷಮಾಪಣೆ ಕೇಳಿದ್ದೇನೆ. ವಿಚಾರಕ್ಕೆ ಹೋಗಿದ್ದಕ್ಕೆ ಜನ ಕಪಾಲಕ್ಕೆ ಹೊಡೆದರು.  ಆ ತಂಟೆಗೆ ನಾವು ಹೋಗುವುದಿಲ್ಲ. ರಾಮಮಂದಿರ ಮಾಡಲು ಮುಂದಾದವರು ಇದೀಗ ಏನಾಗಿದ್ದಾರೆ?  ದೆಹಲಿಯಲ್ಲಿ ಆ ನಾಯಕರು ಇದೀಗ ರೆಸ್ಟ್ ನಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು. 

Tap to resize

Latest Videos

'ಹಿಂಗೆ ಕೆಣಕುತ್ತಿದ್ರೆ ಏನ್ಮಾಡ್ಬೇಕು ಅಂತ ತೋರಿಸ್ಬೇಕಾಗುತ್ತೆ': ದಳಪತಿಗಳಿಗೆ ಯಶ್ ಎಚ್ಚರಿಕೆ

ಜೈಲಿನಲ್ಲಿರುವ ಕಂಪ್ಲಿ ಶಾಸಕ ಗಣೇಶ್ ಅವರನ್ನು ನಿನ್ನೆ ಭೇಟಿ ಮಾಡಿದೆ. ಅವರು ನೋವಿನಲ್ಲಿದ್ದಾರೆ. ತಪ್ಪು ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ತಪ್ಪು ಮಾಡಿದ್ದನ್ನು ತಿದ್ದುವುದು ಜಿಲ್ಲಾ ಸಚಿವನಾಗಿ ನನ್ನ ಕೆಲಸ ಎಂದು ಶಿವಕುಮಾರ  ಹೇಳಿದರು.

click me!