
ಮಂಡ್ಯ, [ಏ.08]: ಮಂಡ್ಯ ಲೋಕಸಭಾ ಅಖಾಡದಲ್ಲಿ ಏಟಿಗೆ-ತಿರುಗೇಟು. ಆರೋಪಕ್ಕೆ-ಪ್ರತ್ಯಾರೋಪ ಜೋರಾಗಿವೆ. ನಾಯಕರ ಡೈಲಾಗ್ ಕೆಲವು ಜನರಿಗೆ ಮನರಂಜನೆ ನೀಡಿದ್ರೆ, ಮತ್ತೊಂದೆಡೆ ಎದುರಾಳಿಗಳ ಪಿತ್ತ ನೆತ್ತಿಗೇರಿಸುತ್ತಿವೆ.
ಬಿಸಿಲಲ್ಲಿ ಸ್ವಲ್ಪ ಓಡಾಡ್ಲಿ... ರೈತರ ಕಷ್ಟ ತಿಳಿಯುತ್ತೆ... ನಟರಿಗೆ ಸಿಎಂ ಟಾಂಗ್
ಅದರಲ್ಲೂ ಇಂದು [ಸೋಮವಾರ] ಮಂಡ್ಯ ಕಣದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರಕ್ಕಿಳಿದಿರುವ ರಾಕಿಂಗ್ ಸ್ಟಾರ್ ಯಶ್ ನಡುವೆ ಏಟು-ಎದುರೇಟುಗಳು ಸಖತ್ ಆಗಿವೆ.
ಸಿಎಂ ಟೀಕೆಗೆ ಪ್ರತ್ಯುತ್ತರ ಕೊಟ್ಟ ಯಶ್!
ಅದರಲ್ಲೂ ರಾಕಿಂಗ್ ಸ್ಟಾರ್ ಯಶ್ ಅವರ ಆಕ್ರೋಶದ ಕಟ್ಟೆ ಒಡೆದಿದ್ದು, ತಮ್ಮ ವಿರುದ್ಧ ಮಾತನಾಡುವವರಿಗೆ ಖಡಕ್ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದ್ದಾರೆ. ಅಷ್ಟಕ್ಕೂ ನಿಖಿಲ್ ಹೇಳಿದ್ದೇನು..? ಇದಕ್ಕೆ ಯಶ್ ಕೊಟ್ಟ ಎಚ್ಚರಿಕೆ ಏನು..? ಪರಸ್ಪರ ಟೀಕೆ-ಟಿಪ್ಪಣಿಗಳು ಹೇಗಿದ್ದವು..? ಮುಂದೆ ನೋಡಿ.
ಯಶ್ ಗೆ ಟಾಂಗ್ ಕೊಟ್ಟ ನಿಖಿಲ್ ಕುಮಾರಸ್ವಾಮಿ
ಹೌದು...ಮೊದಲು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ನಟ ಯಶ್ ಗೆ ಟಾಂಗ್ ಕೊಟ್ಟಿದ್ದಾರೆ. ಮಂಡ್ಯದಲ್ಲಿ ಸೋಮವಾರ ಬಿರುಸಿನ ಪ್ರಚಾರ ನಡುವೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ನಿಖಿಲ್, ಪಕ್ಷೇತರ ಅಭ್ಯರ್ಥಿಯ ಹಿರಿಯ ಮಗನೋ ಅಥವಾ ಕಿರಿ ಮಗನೋ ನನಗೆ ಗೊತ್ತಿಲ್ಲ. ಈ ಬಗ್ಗೆ ಅವರೇ ಸ್ಪಷ್ಟನೆ ನೀಡಬೇಕಾಗುತ್ತದೆ ಎಂದು ಪರೋಕ್ಷವಾಗಿ ಯಶ್ ವಿರುದ್ಧ ಕಿಡಿಕಾರಿದರು
ದಳಪತಿಗಳಿಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ ಅಣ್ತಮ್ಮಾ..!
ನಾನು ಬೆಳೆಯುವ ಸಂದರ್ಭದಲ್ಲಿ ಅಂಬರೀಶ್ ಅವರು ಬೆನ್ನಿಗೆ ನಿಂತು ಆಶೀರ್ವಾದ ಮಾಡಿದ್ದರು. ಅವರ ಕುಟುಂಬಕ್ಕೆ ನಾವು ಮಕ್ಕಳ್ಳೇ, ಅದನ್ನು ಯಾರಾದರೂ ಟೀಕೆ ಮಾಡಿದರೆ, ಯಾವನಾದರೂ ಪ್ರಶ್ನೆ ಮಾಡಿದರೆ ಅದು ಸರಿಯಲ್ಲ. ಹಿಂಗೆ ಕೆಣಕುತ್ತಿದ್ರೆ ನನ್ನ ಅಭ್ಯಾಸ ಏನು ಗೊತ್ತಾ..? ಹಿಯಾಳಿಸುತಿದ್ರೆ ಫುಲ್ ಇಳಿಯೋದೆ ನನ್ನ ಅಭ್ಯಾಸ. ಇನ್ನು ವಯಸ್ಸಿದೆ, ಶಕ್ತಿ ಇದೆ ಏನು ಮಾಡಬೇಕು ಅಂತ ತೋರಿಸಬೇಕಾಗುತ್ತೆ ಡೈಲಾಗ್ ರೀತಿಯಲ್ಲಿ ತಮ್ಮ ವಿರುದ್ಧ ಮಾತನಾಡುವವರಿಗೆ ಖಡಕ್ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದರು.
ಜೆಡಿಎಸ್ ನಾಯಕರ ಟೀಕೆಗಳಿಗೆ ’ರಾಜಾಹುಲಿ’ ಘರ್ಜನೆ
ಅಂಬರೀಶ್ ಅಣ್ಣನ ಹೆಂಡತಿ ಚುನಾವಣೆಗೆ ಸ್ಪರ್ಧೆ ಮಾಡಿದ ತಕ್ಷಣವೇ ಕೆಟ್ಟವರಾಗೋದ್ರಾ? ನೀವು ಕೆಲಸ ಮಾಡಿದ್ದರೆ ಜನರು ಆಶೀರ್ವಾದ ಮಾಡುತ್ತಾರೆ. ಅದನ್ನು ಬಿಟ್ಟು ಗಂಡ ಸತ್ತವರು ಮನೆ ಸೇರಿಕೊಳ್ಳಬೇಕು. ಮನೆಯಿಂದ ಆಚೆ ಬರಬಾರದು. ಯಾವುದೋ ಊರಿಗೆ ಸೇರಿದವರು. ಜಾತಿಗೆ ಸಂಬಂಧ ಪಟ್ಪವರಲ್ಲ ಎನ್ನುವುದು ಯಾವ ನ್ಯಾಯ ಸ್ವಾಮಿ, ಸುಮಲತಾ ಅವರಿಗೆ ಸಹಾಯ ಮಾಡುವುದಕ್ಕೆ ಬರುತ್ತೇವೆ ಅಂದರೆ ನಾವು ಕಳ್ಳೆತ್ತು ಆಗಿಬಿಡ್ತೀವಾ? ಎಂದು ಜೆಡಿಎಸ್ ನಾಯಕರ ಟೀಕೆಗಳಿಗೆ ಯಶ್ ಸೈಲೆಂಟ್ ಆಗಿಯೇ ಟಾಂಗ್ ಕೊಟ್ಟರು.
ಒಟ್ಟಿನಲ್ಲಿ ಮಂಡ್ಯ ಕಣದಲ್ಲಿ ದಳಪತಿಗಳಿಗೆ ಯಶ್ ಮತ್ತು ದರ್ಶನ್ ಸೂಕ್ಷ್ಮವಾಗಿಯೇ ಒಂದೊಂದೇ ಡೈಲಾಗ್ ಮೂಲಕ ಏಟಿಗೆ ಎದುರೇಟು ನೀಡುತ್ತಿದ್ದಾರೆ.