ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ದೂರು ದಾಖಲು

By Web DeskFirst Published Apr 16, 2019, 5:45 PM IST
Highlights

ಚುನಾವಣಾ ನೀತಿಸಂಹಿತೆ ಉಲ್ಲಂಘನೆ ತೇಜಸ್ವಿ ಸೂರ್ಯ ವಿರುದ್ಧ ದೂರು| ಬೆಂಗಳೂರು ದಕ್ಷಿಣ ಚುನಾವಣಾ ಅಧಿಕಾರಿಗೆ ದೂರು ನೀಡಿದ ಸಾಮಾಜಿಕ ಕಾರ್ಯಕರ್ತ ಯೋಗಾನಂದ.

ಬೆಂಗಳೂರು, [ಏ.16]: ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಆರೋಪದ ಅಡಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ದೂರು ದಾಖಲಾಗಿದೆ. 

ಚುನಾವಣಾ ನೀತಿಸಂಹಿತೆ ಅನ್ವಯ ಪ್ರಚಾರ ರ‍್ಯಾಲಿ ವೇಳೆ ವಾಹನಕ್ಕೆ LED ಲೈಟ್ ಅಳವಡಿಕೆ ಮಾಡುವಂತಿಲ್ಲ. ಆದ್ರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಭಾಗವಹಿಸಿದ್ದ ರೋಡ್ ಶೋ ವೇಳೆ ಎಲ್‌ಇಡಿ ದೀಪ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಯೋಗಾನಂದ ಅವರು ಬೆಂಗಳೂರು ದಕ್ಷಿಣ ಚುನಾವಣಾ ಅಧಿಕಾರಿಗೆ ದೂರು ನೀಡಿದ್ದಾರೆ.

ಕಾಂಗ್ರೆಸ್‌ಗೆ ಟಿಪ್ಪು ಹೀರೋ ಆದ್ರೆ, ಬಿಜೆಪಿಗೆ ಅಬ್ದುಲ್ ಕಲಾಂ ಹೀರೋ: ತೇಜಸ್ವಿ ಸೂರ್ಯ

ಏ.14ರಂದು ಬೆಂಗಳೂರಿನ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಎಸ್.ಯಡಿಯೂರಪ್ಪ  ಭರ್ಜರಿ ರೋಡ್ ಶೋ ನಡೆಸಿ, ತೇಜಸ್ವಿ ಸೂರ್ಯ  ಪರ ಮತಯಾಚಿಸಿದ್ದರು.

click me!