ಪ್ರಧಾನಿ ಮೋದಿ ನಮ್ಗೆ ಹೆಲಿಕಾಪ್ಟರ್ ಕೊಡ್ತಿಲ್ಲ: ಸಿಎಂ ಅಳಲು!

Published : Apr 03, 2019, 12:57 PM IST
ಪ್ರಧಾನಿ ಮೋದಿ ನಮ್ಗೆ ಹೆಲಿಕಾಪ್ಟರ್ ಕೊಡ್ತಿಲ್ಲ: ಸಿಎಂ ಅಳಲು!

ಸಾರಾಂಶ

ದೋಸ್ತಿ ನಾಯಕರಿಗೆ ಪ್ರಚಾರಕ್ಕೆ ಹೆಲಿಕಾಪ್ಟರ್ ಸಿಗದಂತೆ ರಣತಂತ್ರ?| ಹೆಲಿಕಾಪ್ಟರ್ ಸಿಗದಂತೆ ಕೇಂದ್ರ ಸರ್ಕಾರ ಮಾಡಿದೆ ಎಂದು ಸಿಎಂ ಆರೋಪ| 'ಜನಸಂಪರ್ಕ ಮಾಡದಂತೆ ಕೀಳುಮಟ್ಟದ ರಾಜಕಾರಣ ಮಾಡಲಾಗುತ್ತಿದೆ'|

ಹಾಸನ(ಏ.03): ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ರಾಜಕೀಯ ನಾಯಕರ ಆರೋಪ, ಪ್ರತ್ಯಾರೋಪಗಳನ್ನು ಕೇಳಿ ಖುದ್ದು ಸೂರ್ಯ ಕೂಡ ಬೆವರುತ್ತಿದ್ದಾನೆ.

ಪ್ರಧಾನಿ ನರೇಂದ್ರ ಮೋದಿ ವಿಪಕ್ಷ ನಾಯಕರಿಗೆ ಪ್ರಚಾರ ಮಾಡಲು ಹೆಲಿಕಾಪ್ಟರ್ ಸಿಗದಂತೆ ಕುತಂತ್ರ ನಡೆಸಿದ್ದಾರೆ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದು, ನಾವು ಜನಸಂಪರ್ಕ ಮಾಡದಂತೆ ತಡೆಯಲು ಮೋದಿ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

ರಾಜ್ಯದಲ್ಲಿ ದೋಸ್ತಿ ನಾಯಕರ ಪ್ರಚಾರಕ್ಕೆ ಹೆಲಿಕಾಪ್ಟರ್ ಸಿಗದಂತೆ ಮೋದಿ ಕುತಂತ್ರ ನಡೆಸಿದ್ದು, ರಾಜ್ಯ ಬಿಜೆಪಿ ನಾಯಕರೇ ಹೆಲಿಕಾಪ್ಟರ್ ಕೊಡದಂತೆ ಮೋದಿ ಕಿವಿ ಊದಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!