185 ಮಂದಿ ಸ್ಪರ್ಧೆಯಲ್ಲಿರುವ ಈ ಕ್ಷೇತ್ರದಲ್ಲಿ ವಿಶೇಷ ಇವಿಎಂ

By Web DeskFirst Published Apr 3, 2019, 12:16 PM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಚುನಾವಣೆ ಸಿದ್ಧತೆ ನಡೆಯುತ್ತಿದೆ. ಇದೇ ವೇಳೆ ನಿಜಾಮಾಬಾದ್ ಕ್ಷೇತ್ರದಲ್ಲಿ 185 ಅಭ್ಯರ್ಥಿಗಳು ಕಣದಲ್ಲಿರುವ ಹಿನ್ನೆಲೆಯಲ್ಲಿ ವಿಶೇಷ ವಿದ್ಯುನ್ಮಾನ ಮತಯಂತ್ರ ಬಳಸಲಾಗುತ್ತಿದೆ. 

ಹೈದರಾಬಾದ್‌: ಬರೋಬ್ಬರಿ 185 ಮಂದಿ ಅಭ್ಯರ್ಥಿಗಳು ಕಣಕ್ಕಿಳಿದಿರುವ ಹಿನ್ನೆಲೆಯಲ್ಲಿ ದೇಶದ ಗಮನ ಸೆಳೆದಿರುವ ತೆಲಂಗಾಣದ ನಿಜಾಮಾಬಾದ್‌ ಲೋಕಸಭಾ ಕ್ಷೇತ್ರದಲ್ಲಿ ಬ್ಯಾಲೆಟ್‌ ಪೇಪರ್‌ ಬದಲಿಗೆ ವಿಶೇಷ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳ ಮೂಲಕ ಚುನಾವಣೆ ನಡೆಸಲು ಆಯೋಗ ನಿರ್ಧರಿಸಿದೆ.

ಇದಕ್ಕಾಗಿ ‘ಎಂ3’ ಮಾದರಿಯ 26280 ಮತಯಂತ್ರ, 2240 ಕಂಟ್ರೋಲ್‌ ಯುನಿಟ್‌ ಹಾಗೂ 2600 ವಿವಿಪ್ಯಾಟ್‌ ಯಂತ್ರಗಳನ್ನು ತೆಲಂಗಾಣದ ಮುಖ್ಯ ಚುನಾವಣಾಧಿಕಾರಿಗಳಿಗೆ ಸರಬರಾಜು ಮಾಡುವಂತೆ ಕೇಂದ್ರ ಚುನಾವಣಾ ಆಯೋಗ ತುರ್ತು ಆದೇಶವೊಂದನ್ನು ಹೊರಡಿಸಿದೆ. ಎಂ3 ಮಾದರಿಯ ಮತಯಂತ್ರಗಳಲ್ಲಿ ತಲಾ 16 ಅಭ್ಯರ್ಥಿಗಳ ಹೆಸರನ್ನು ಹೊಂದಿರುವ 24 ಮತಯಂತ್ರಗಳನ್ನು ಸಂಪರ್ಕಿಸಿ ಗರಿಷ್ಠ 384 ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಬಹುದಾಗಿದೆ.

Latest Videos

ಈವರೆಗೂ ಆಯೋಗ ಎಂ2 ಮಾದರಿಯ ಮತಯಂತ್ರಗಳನ್ನು ಬಳಸುತ್ತಿದ್ದು, 1 ಮತಯಂತ್ರದಲ್ಲಿ 16 ಅಭ್ಯರ್ಥಿಗಳ ಹೆಸರು ನಮೂದಿಸಲು ಅವಕಾಶವಿರುತ್ತದೆ. ಅದಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ಸ್ಪರ್ಧಿಸಿದರೆ ಮತ್ತೊಂದು ಮತಯಂತ್ರ ಜೋಡಿಸಬಹುದು. ಹೀಗೆ ಒಟ್ಟು 4 ಮತಯಂತ್ರಗಳನ್ನು ಜೋಡಿಸಿ, 64 ಅಭ್ಯರ್ಥಿಗಳಿಗೆ ಅವಕಾಶ ನೀಡಬಹುದಾಗಿರುತ್ತದೆ.

ಆದರೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಪುತ್ರಿ ಪುನರಾಯ್ಕೆ ಬಯಸುತ್ತಿರುವ ನಿಜಾಮಾಬಾದ್‌ ಕ್ಷೇತ್ರದಲ್ಲಿ 179 ರೈತರು ಅಖಾಡಕ್ಕೆ ಇಳಿದಿದ್ದಾರೆ. ಒಟ್ಟು 184 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಎಲ್ಲರಿಗೂ ಮತಯಂತ್ರದಲ್ಲಿ ಅವಕಾಶ ಕಲ್ಪಿಸುವುದು ಅಸಾಧ್ಯವಾದ ಕಾರಣ ಆಯೋಗ ಬ್ಯಾಲೆಟ್‌ ಪೇಪರ್‌ ಮೊರೆ ಹೋಗಲಿದೆ ಎಂದು ಹೇಳಲಾಗಿತ್ತು. ಆದರೆ ಆಯೋಗ ಎಂ3 ಯಂತ್ರಗಳನ್ನು ಬಳಸಲು ನಿರ್ಧರಿಸಿದೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ 

click me!