ರೈತರ ಉದ್ಧಾರಕ್ಕೆ ಸುಮಲತಾ ಅಂಬರೀಶ್ ಸಲಹೆ ಕೇಳಿದ ಕುಮಾರಸ್ವಾಮಿ..!

Published : Mar 15, 2019, 08:39 PM ISTUpdated : Mar 20, 2019, 11:13 AM IST
ರೈತರ ಉದ್ಧಾರಕ್ಕೆ ಸುಮಲತಾ ಅಂಬರೀಶ್ ಸಲಹೆ ಕೇಳಿದ ಕುಮಾರಸ್ವಾಮಿ..!

ಸಾರಾಂಶ

ಸರಣಿ ಟ್ವೀಟ್ ಮೂಲಕ ಸುಮಲತಾ ಅಂಬರೀಶ್ ಕಾಲೆಳೆದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ | ರೈತರ ಉದ್ಧಾರಕ್ಕೆ ಸುಮಲತಾ ಅಂಬರೀಶ್ ಸಲಹೆ ಕೇಳಿ ಪರೋಕ್ಷವಾಗಿ ಟೀಕಿಸಿದ ಕುಮಾರಸ್ವಾಮಿ..|

ಬೆಂಗಳೂರು, [ಮಾ.15]: ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದತ್ತ ಎಲ್ಲರ ಚಿತ್ತ ನೆಟ್ಟಿದೆ. ಒಂದು ಕಡೆ ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ಧುಮುಕ್ಕಿದ್ದರೆ, ಮತ್ತೊಂದೆಡೆ ಸಿಎಂ ಎಚ್.ಡಿ. ಪುತ್ರ ನಿಖಿಲ್ ಕುಮಾರಸ್ವಾಮಿ ಅದೃಷ್ಟ ಪರೀಕ್ಷೆಗಳಿದಿದ್ದಾರೆ. 

ಇದ್ರಿಂದ ಮಂಡ್ಯ ಲೋಕಸಭಾ ಚುನಾವಣೆ ಕಣ ದಿನದಿಂದ ದಿನಕ್ಕೆ ಭಾರೀ ರಂಗೇರಿತ್ತಿದ್ದು, ಮಂಡ್ಯ ಕ್ಷೇತ್ರ ಕುಮಾರಸ್ವಾಮಿಗೆ ಪ್ರತಿಷ್ಠೆಯ ಕಣವಾಗಿದ್ದು, ಮಗನನ್ನು ಗೆಲ್ಲಿಸಲೇಬೇಕಾದ ಅನಿರ್ವಾಯತೆ ಎದರುರಾಗಿದೆ. 

ಈ ಹಿನ್ನೆಯಲ್ಲಿ ಸುಮಲತಾ ವರನ್ನು ಸೋಲಿಸಲು ಕುಮಾರಸ್ವಾಮಿ ತಮ್ಮ ಬತ್ತಳಕೆಯಲ್ಲಿರುವ ಬಾಣಗಳನ್ನು ಒಂದೊಂದಾಗಿಯೇ ಪ್ರಯೋಗಿಸುತ್ತಿದ್ದಾರೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಮಂಡ್ಯ ಕ್ಷೇತ್ರದ್ದೇ ಹವಾ.

ಮಂಡ್ಯದ ಕೆಲವು ಅಂಬರೀಶ್ ಅಭಿಮಾನಿಗಳು ಜೆಡಿಎಸ್‌ ವಿರುದ್ಧ ಆಕ್ರೋಶಗೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಜೆಡಿಎಸ್ ಅಭಿಮಾನಿಗಳು ಸಹ ಸುಮಲತಾ ಅಂಬರೀಶ್ ಗೆ ಟಾಂಗ್ ಕೊಡುತ್ತಿದ್ದಾರೆ. 

ಇನ್ನು ಕುಮಾರಸ್ವಾಮಿ ಸಹ ಟ್ವಿಟ್ಟರ್ ನಲ್ಲಿ ಸುಮಲತಾ ಅಂಬರೀಶ್ ಗೆ ಸರಣಿ ಟ್ವೀಟ್ ಮೂಲಕ ಸೂಕ್ಷ್ಮವಾಗಿ ಟಾಂಗ್ ಕೊಟ್ಟಿದ್ದಾರೆ.
 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!