ಚುನಾವಣೆಯಲ್ಲಿ ನಕಲಿ ನೋಡು ಹಂಚಿದರಾ ಮೈತ್ರಿ ಅಭ್ಯರ್ಥಿ?| ಮತದಾರರಿಗೆ ನಕಲಿ ನೋಟು ಹಂಚಿದ ಆರೋಪ| ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ವಿರುದ್ಧ ಮತದಾರರ ಆಕ್ರೋಶ| ಚಲಾವಣೆಯಲ್ಲಿಲ್ಲದ 100 ರೂ. ನೋಟುಗಳು ಪತ್ತೆ| ಚಿಕ್ಕಬಳ್ಳಾಪುರದಲ್ಲಿ ಮೊದಲ ಹಂತದ ಮತದಾನದಲ್ಲಿ ಶೇ.76.14%ರಷ್ಟು ಮತದಾನ|
ಚಿಕ್ಕಬಳ್ಳಾಪುರ(ಏ.20): ತೀವ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಹಂತದ ಮತದಾನ ಪೂರ್ಣಗೊಂಡಿದ್ದು, ಕ್ಷೇತ್ರದಲ್ಲಿ ಇದೀಗ ಕೋಟಾ ನೋಟುಗಳದ್ದೇ ಮಾತು.
ಹೌದು, ಚುನಾವಣೆ ಮುಗಿದು ಕ್ಷೇತ್ರ ಶಾಂತವಾಗಿದೆ ಅಂದುಕೊಳ್ಳುತ್ತಿದ್ದಂತೇ, ಚುನಾವಣೆಯಲ್ಲಿ ಅಭ್ಯರ್ಥಿಗಳು ನಕಲಿ ನೋಟುಗಳನ್ನು ಹಂಚಿದ್ದಾರೆ ಎಂಬ ಅಸಮಾಧಾನ ಕ್ಷೇತ್ರದಲ್ಲಿ ಭುಗಿಲೆದ್ದಿದೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ವಿರುದ್ಧ ನಕಲಿ ನೋಟು ಹಂಚಿದ ಆರೋಪ ಕೇಳಿ ಬಂದಿದೆ. ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಣ ಹಂಚಲಾಗಿದ್ದು, ಇವುಗಳಲ್ಲಿ ಚಲಾವಣೆಯಲ್ಲಿಲ್ಲದ 100 ರೂ. ನೋಟುಗಳು ಪತ್ತೆಯಾಗಿವೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಹಣ ಪಡೆದ ಕೆಲವು ಮತದಾರರು ಮೊಯ್ಲಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದು, ನಕಲಿ ನೋಟುಗಳನ್ನು ಹಂಚು ಮೂಲಕ ನಮಗೆ ಮೋಸ ಮಾಡಿದ್ದಾರೆ ಎಂದು ಬೈದುಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಿಕ್ಕಬಳ್ಳಾಪುರದಲ್ಲಿ ಮೊದಲ ಹಂತದ ಮತದಾನದಲ್ಲಿ ಶೇ.76.14%ರಷ್ಟು ಮತದಾನವಾಗಿದ್ದು, ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಚ್ಚೇಗೌಡ ಮತ್ತು ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಕಣದಲ್ಲಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ವೀರಪ್ಪ ಮೊಯ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಗಳಿಸಿದ್ದರು.