ಜಗನ್, ಕೆಸಿಆರ್ ಪ್ರಧಾನಿ ಮೋದಿಯ ಸಾಕುನಾಯಿಗಳು: ನಾಯ್ಡು!

Published : Apr 09, 2019, 02:00 PM IST
ಜಗನ್, ಕೆಸಿಆರ್ ಪ್ರಧಾನಿ ಮೋದಿಯ ಸಾಕುನಾಯಿಗಳು: ನಾಯ್ಡು!

ಸಾರಾಂಶ

ಕೆಳಮಟ್ಟಕ್ಕಿಳಿದ ರಾಜಕೀಯ ನೇತಾರರ ಟೀಕೆ ಟಿಪ್ಪಣಿ| ವಿಷಯಾಧಾರಿತ ರಾಜಕಾರಣ ಮರೆತ ಹಿರಿಯ ನೇತಾರರು| ಜಗನ್, ಕೆಸಿಆರ್ ಪ್ರಧಾನಿ ಮೋದಿಯ ಸಾಕುನಾಯಿಗಳು ಎಂದ ಚಂದ್ರಬಾಬು ನಾಯ್ಡು| ಆಂಧ್ರಪ್ರದೇಶ ಸಿಎಂ ನಾಯ್ಡು ಹೇಳಿಕೆಗೆ ತೀವ್ರ ಆಕ್ರೋಶ| ಜಗನ್, ಕೆಸಿಆರ್ ಮೋದಿ ಎಸೆದ ಬಿಸ್ಕತ್ ತಿನ್ನುತ್ತಿದ್ದಾರೆ ಎಂದ ನಾಯ್ಡು| ಜಗನ್ ಪ್ರಚಾರಕ್ಕೆ ಬಿಜೆಪಿ, ಟಿಆರ್ಎಸ್ ಹಣ ನೀಡಿದ ಆರೋಪ| 

ಕೃಷ್ಣಾ(ಏ.09):ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೇ ರಾಜಕಾರಣಿಗಳ ನಾಲಿಗೆಯ ಮೇಲಿನ ಹಿಡಿತ ದಾರಿ ತಪ್ಪುತ್ತಿದೆ. ವಿಷಯಾಧಾರಿತ ರಾಜಕಾರಣ ಮರೆಯಾಗಿ ವೈಯಕ್ತಿಕ ಟೀಕೆ ಟಿಪ್ಪಣಿಗಳಿಗೆ ಚುನಾವಣೆ ಸಿಮೀತವಾಗುತ್ತಿದೆ.

 ವೈಎಸ್‌ಆರ್  ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಹಾಗೂ ಟಿಆರ್‌ಎಸ್  ಮುಖ್ಯಸ್ಥ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮೋದಿಯ ಸಾಕು ನಾಯಿಗಳು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಲೇವಡಿ ಮಾಡಿದ್ದಾರೆ.

ಜಗನ್ ಮೋಹನ್ ರೆಡ್ಡಿ ಹಾಗೂ ತೆಲಂಗಾಣ ಸಿಎಂ ಕೆಸಿಆರ್ ಸಾಕುನಾಯಿಯ ರೀತಿ ಮೋದಿ ಎಸೆದ ಬಿಸ್ಕತ್ ತಿನ್ನುತ್ತಿರುವುದು ನಾಚಿಕೆಗೇಡು ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಮೋದಿ ಎಸೆದ ಬಿಸ್ಕತ್ ನ್ನೇ ಇವರು ಜನರಿಗೂ ನೀಡಲು ಬಯಸಿದ್ದು, ಎಚ್ಚರಿಕೆಯಿಂದ ಇರುವಂತೆ ನಾಯ್ಡು ಜನರಲ್ಲಿ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪ್ರಚಾರಕ್ಕೆ ಬಿಜೆಪಿ ಹಣ ನೀಡುತ್ತಿದ್ದು, ಕೆಸಿಆರ್ ಕೂಡ ಜಗನ್‌ಗೆ ಸಾವಿರಾರು ಕೋಟಿ ರೂ. ನೀಡಿದ್ದಾರೆ ಎಂದು ನಾಯ್ಡು ಆರೋಪಿಸಿದರು. 

ಆಂಧ್ರಪ್ರದೇಶದಲ್ಲಿ ಏಪ್ರಿಲ್ 11 ರಂದು ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ಏಕಕಾಲದಲ್ಲಿ ನಡೆಯಲಿದ್ದು, ಮೇ 23 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!