ಒಂದು ತಿಂಗಳು ಟಿವಿ ಡಿಬೆಟ್ ಮಾಡಲ್ಲ ಎಂದ ಕಾಂಗ್ರೆಸ್!

Published : May 30, 2019, 12:13 PM IST
ಒಂದು ತಿಂಗಳು ಟಿವಿ ಡಿಬೆಟ್ ಮಾಡಲ್ಲ ಎಂದ ಕಾಂಗ್ರೆಸ್!

ಸಾರಾಂಶ

ಕಾಂಗ್ರೆಸ್‌ಗೆ ತೀವ್ರ ಮುಜುಗರ ತಂದಿತ್ತ ಚುನಾವಣಾ ಸೋಲು| ಗೊಂದಲ ಸೃಷ್ಟಿಸಿದ ರಾಹುಲ್ ಗಾಂಧಿ ರಾಜೀನಾಮೆ ಪ್ರಸ್ತಾಪ| ಒಂದು ತಿಂಗಳು ಟಿವಿ ಡಿಬೆಟ್ ನಲ್ಲಿ ಭಾಗವಹಿಸದಿರಲು ಕಾಂಗ್ರೆಸ್ ನಿರ್ಧಾರ| ಚರ್ಚೆಗಳಲ್ಲಿ ಪಕ್ಷದ ವಕ್ತಾರರನ್ನು ಕರೆಯದಿರುವಂತೆ ಕಾಂಗ್ರೆಸ್ ಮನವಿ|

ನವದೆಹಲಿ(ಮೇ.30): ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿರುವ ಕಾಂಗ್ರೆಸ್, ಒಂದು ತಿಂಗಳುಗಳ ಕಾಲ ಯಾವುದೇ ಸುದ್ದಿವಾಹಿನಿಯ ಚರ್ಚೆಗಳಲ್ಲಿ ಭಾಗವಹಿಸದಿರಲು ನಿರ್ಧರಿಸಿದೆ.

ಚುನಾವಣಾ ಸೋಲು ಮತ್ತು ರಾಹುಲ್ ಗಾಂಧಿ ರಾಜೀನಾಮೆ ವಿಚಾರ ಪಕ್ಷದಲ್ಲಿ ಗೊಂದಲ ಸೃಷ್ಟಿಸಿದ್ದು, ಆಂತರಿಕ ಗೊಂದಲ ಬಗೆಹರಿಯುವವರೆಗೂ ಯಾವುದೇ ಸುದ್ದಿವಾಹಿನಿಯಲ್ಲಿ ನಡೆಯುವ ಚರ್ಚೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.

ಈ ಕುರಿತು ಟ್ವಿಟ್ ಮೂಲಕ ಮಾಹಿತಿ ನೀಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ, ಚರ್ಚೆಗಳಲ್ಲಿ ಕಾಂಗ್ರೆಸ್ ವಕ್ತಾರರನ್ನು ಕರೆಯದಿರುವುದಂತೆ ಎಲ್ಲಾ ಸುದ್ದಿವಾಹಿನಿಗಳ ಮುಖ್ಯಸ್ಥರಿಗೆ ಮನವಿ ಮಾಡಿದ್ದಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!