ಪತ್ರಕರ್ತರಿಗೆ ರಹಸ್ಯ ಲಕೋಟೆ: ಬಿಜೆಪಿ ಎಂದಿತು ‘ಚಲ್ ಜೂಟೆ’!

By Web DeskFirst Published May 8, 2019, 2:03 PM IST
Highlights

ಪತ್ರಕರ್ತರ ಕೈಗೆ ಮುಚ್ಚಿದ ಲಕೋಟೆ ಕೊಟ್ಟ ಬಿಜೆಪಿ ನಾಯಕ| ಪಕ್ಷ ಪರ ವರದಿಗಾರಿಕೆಗಾಗಿ ಪತ್ರಕರ್ತರನ್ನು ಖರೀದಿಸಿತಾ ಬಿಜೆಪಿ?| ಬಿಜೆಪಿ ವಿರುದ್ಧ ಲೆಹ್ ಪತ್ರಕರ್ತರ ಸಂಘದ ಆರೋಪ| ಪತ್ರಿಕಾಗೋಷ್ಠಿಯ ಸಿಸಿಟಿವಿ ದೃಶ್ಯಾವಳಿ ಬಿಡುಗಡೆ ಮಾಡಿದ ಪತ್ರಕರ್ತರ ಸಂಘ| ಪತ್ರಕರ್ತರ ಸಂಘದ ಆರೋಪ ನಿರಾಕರಿಸಿದ ಬಿಜೆಪಿ| ಸಂಘದ ವಿರುದ್ಧ ಮೊಕದ್ದಮೆ ಹೂಡುವುದಾಗಿ ಬಿಜೆಪ ಸ್ಪಷ್ಟನೆ| 

ಶ್ರೀನಗರ(ಮೇ.08): ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಪರ ವರದಿಗಾರಿಕೆ ಮಾಡುವಂತೆ ಬಿಜೆಪಿ ಪತ್ರಕರ್ತರಿಗೆ ಆಮೀಷವೊಡಡಿದೆ ಎಂದು ಇತ್ತೀಚಿಗೆ ಲೆಹ್ ಪತ್ರಕರ್ತರ ಸಂಘ ಆರೋಪಿಸಿತ್ತು.

ಇದೀಗ ಬಿಜೆಪಿ ಶಾಸಕ ವಿಕ್ರಮ್ ರಂಧಾವಾ ಪತ್ರಕರ್ತರಿಗೆ ಮುಚ್ಚಿದ ಲಕೋಟೆ ಕೊಡುತ್ತಿರುವ ಸಿಸಿಟಿವಿ ದೃಶ್ಯಾವಳಿಯನ್ನು ಪತ್ರಕರ್ತರ ಸಂಘ ಬಿಡುಗಡೆ ಮಾಡಿದೆ.

ಬಿಜೆಪಿ ರಾಜ್ಯಾಧ್ಯಕ್ಷ ರವೀಂದ್ರ ರಾಣಾ ನೇತೃತ್ವದಲ್ಲಿ ಇಲ್ಲಿನ ಹೊಟೇಲ್ ಸಿಂಗೆ ಪ್ಯಾಲೆಸ್’ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಪತ್ರಕರ್ತರನ್ನು ಖರೀದಿಸುವ ಯತ್ನ ನಡೆದಿದೆ ಎಂದು ಲೆಹ್ ಪತ್ರಕರ್ತರ ಸಂಘ ಆರೋಪಿಸಿದೆ.

ವಿಕ್ರಮ್ ರಂಧಾವಾ ಕೆಲವು ಪತ್ರಕರ್ತರಿಗೆ ಮುಚ್ಚಿದ ಲಕೋಟೆ ನೀಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಚುನಾವಣಾ ಆಯೋಗಕ್ಕೆ ನೀಡಿದ್ದ ದೂರಿನಲ್ಲಿ ಈ ವಿಡಿಯೋ ಕುರಿತು ಪತ್ರಕರ್ತರ ಸಂಘ ಉಲ್ಲೇಖಿಸಿದೆ.

ಈ ಮಧ್ಯೆ ಲೆಹ್ ಪತ್ರಕರ್ತರ ಸಂಘ ಮಾಡಿರುವ ಆರೋಪವನ್ನು ತಳ್ಳಿ ಹಾಕಿರುವ ಬಿಜೆಪಿ, ಇದೊಂದು ವ್ಯವಸ್ಥಿತ ಷಡ್ಯಂತ್ರವಾಗಿದ್ದು, ಪತ್ರಕರ್ತರನ್ನು ಖರೀದಿಸುವ ಯತ್ನ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ.

ಅಲ್ಲದೇ ಪಕ್ಷ ಮತ್ತು ನಾಯಕರ ವಿರುದ್ಧ ಸುಳ್ಳು ಆರೋಪಕ್ಕೆ ಪ್ರತಿಯಾಗಿ ಲೆಹ್ ಪತ್ರಕರ್ತರ ಸಂಘದ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದಾಗಿ ಬಿಜೆಪಿ ತಿಳಿಸಿದೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಘಿ ಇಲ್ಲಿ ಕ್ಲಿಕ್ ಮಾಡಿ

click me!