ಕತ್ತೆ ಮೇಲೆ ಬಂದವನ ನಾಮಪತ್ರ ತಿರಸ್ಕೃತ!

Published : May 02, 2019, 09:39 AM IST
ಕತ್ತೆ ಮೇಲೆ ಬಂದವನ ನಾಮಪತ್ರ ತಿರಸ್ಕೃತ!

ಸಾರಾಂಶ

ಕತ್ತೆ ಮೇಲೆ ನಾಮಪತ್ರ ಸಲ್ಲಿಸಲು ಬಂದ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದೆ. ಕಾರಣವೇನು? ಇಲ್ಲಿದೆ ವಿವರ

ಪಾಟ್ನ[ಮೇ.02]: ಕತ್ತೆಯ ಮೇಲೆ ಸವಾರಿ ಮಾಡಿಕೊಂಡು ಬಂದು ವಿನೂತನವಾಗಿ ನಾಮಪತ್ರ ಸಲ್ಲಿಸಿದ್ದ ಬಿಹಾರದ ಜೆಹಾನಾಬಾದ್‌ನ ವ್ಯಕ್ತಿಯೊಬ್ಬರು ಇಲ್ಲದ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಸಾಮಾನ್ಯ ಜನರನ್ನು ರಾಜಕಾರಣಿಗಳು ಕತ್ತೆಗಳಂತೆ ಕಾಣುತ್ತಾರೆ ಎಂಬುದನ್ನು ತೋರಿಸುವ ಸಲುವಾಗಿ ಮಣಿಭೂಷಣ್‌ ಎಂಬುವವರು ಕತ್ತೆ ಏರಿ ಬಂದು ನಾಮಪತ್ರ ಸಲ್ಲಿಸಿದ್ದರು. ಆದರೆ ಚುನಾವಣಾಧಿಕಾರಿಗಳು ತಾಂತ್ರಿಕ ಕಾರಣವೊಡ್ಡಿ ನಾಮಪತ್ರ ತಿರಸ್ಕರಿಸಿದ್ದಾರೆ.

ಇಷ್ಟು ಸಾಲದೆಂಬಂತೆ ಪ್ರಾಣಿಗಳ ಮೇಲೆ ಕ್ರೂರತೆ ಮೆರೆದ ಕಾರಣಕ್ಕಾಗಿ ಮಣಿಭೂಷಣ್‌ ಎಂಬ ಸ್ವತಂತ್ರ ಅಭ್ಯಥಿ ವಿರುದ್ಧ ಇದೀಗ ಪೊಲೀಸರು ಕೇಸು ಕೂಡಾ ದಾಖಲಿಸಿದ್ದಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!