ಬಿಜೆಪಿಗೆ ಮತ, ಬೇಸತ್ತು ಕೈಬೆರಳೇ ಕತ್ತರಿಸಿಕೊಂಡ ಯುವಕ

Published : Apr 19, 2019, 09:02 AM IST
ಬಿಜೆಪಿಗೆ ಮತ, ಬೇಸತ್ತು ಕೈಬೆರಳೇ ಕತ್ತರಿಸಿಕೊಂಡ ಯುವಕ

ಸಾರಾಂಶ

ಅಚಾತುರ್ಯವಾಗಿ ಬಿಜೆಪಿಗೆ ಮತ ಹಾಕಿದ್ದಕ್ಕೆ ಬೇಸರ| ತನ್ನ ಕೈ ಬೆರಳನ್ನೇ ಕತ್ತರಿಸಿಕೊಂಡ ಯುವಕ| ಬಿಎಸ್‌ಪಿಯ ಕಟ್ಟಾ ಬೆಂಬಲಿಗ ಪವನ್ ಕುಮಾರ್ ವಿಡಿಯೋ ವೈರಲ್

ಬುಲಂದ್‌ಶಹರ್[ಏ.19]: ಮಾಯಾವತಿ ನೇತೃತ್ವದ ಬಿಎಸ್‌ಪಿ ಅಭ್ಯರ್ಥಿಗೆ ಮತ ಹಾಕುವ ಬದಲಿಗೆ ಅಚಾತುರ್ಯವಾಗಿ ಬಿಜೆಪಿಗೆ ಮತ ಹಾಕಿದ್ದಕ್ಕೆ ಬೇಸರಗೊಂಡ ದಲಿತ ಯುವಕನೋರ್ವ ತನ್ನ ಕೈ ಬೆರಳನ್ನೇ ಕತ್ತರಿಸಿಕೊಂಡ ದುರ್ಘಟನೆ ಬುಲಂದ್‌ಶಹರ್‌ನಲ್ಲಿ ನಡೆದಿದೆ.

ಬಿಜೆಪಿಯ ಹಾಲಿ ಸಂಸದ ಭೋಲಾ ಸಿಂಗ್ ಹಾಗೂ ಬಿಎಸ್‌ಪಿ-ಎಸ್‌ಪಿ-ಆರ್ ಎಲ್‌ಡಿ ಮೈತ್ರಿ ಅಭ್ಯರ್ಥಿ ಯೋಗೇಶ್ ವರ್ಮಾ ಅವರು ಕಣದಲ್ಲಿದ್ದಾರೆ. ಇಲ್ಲಿನ ಗ್ರಾಮದ ಬಿಎಸ್‌ಪಿಯ ಕಟ್ಟಾ ಬೆಂಬಲಿಗ ಪವನ್ ಕುಮಾರ್[25] ಎಂಬ ಯುವಕ ಬಿಎಸ್‌ಪಿಗೆ ಮತ ಹಾಕಲು ಹೋಗಿದ್ದ. ಆದರೆ, ಅಚಾತುರ್ಯವಾಗಿ ಬಿಜೆಪಿಗೆ ಮತ ಹಾಕಿದ್ದ. ಇದರಿಂದ ಬೇಸರಗೊಂಡ ಯುವಕ ತನ್ನ ಬೆರಳನ್ನೇ ಕತ್ತರಿಸಿಕೊಂಡಿದ್ದಾನೆ.

ಬಳಿಕ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾನೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!