ಚುನಾವಣೆಯ ಹೀರೋಗಳೊಂದಿಗೆ ಸೆಲ್ಫೀ ಕ್ಲಿಕ್ಕಿಸಿಕೊಂಡ 'ಸಿಂಗಂ', ಟ್ವೀಟ್ ವೈರಲ್

By Web Desk  |  First Published Apr 19, 2019, 8:46 AM IST

ಮತದಾನದಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಡಿಫೆರೆಂಟ್ ಸೆಲ್ಫೀ| ಫೋಟೋ ಟ್ವೀಟ್ ಮಾಡಿದ ಡಿಸಿಪಿ ಕೊಟ್ಟ ಮೆಸೇಜ್ ಕೂಡಾ ಭಿನ್ನ| ಸಿಂಗಂ ಟ್ವೀಟ್ ಫುಲ್ ವೈರಲ್


ಬೆಂಗಳೂರು[ಏ.19]:  ಸಾಮಾನ್ಯವಾಗಿ ಅಧಿಕಾರದಲ್ಲಿ ಮೇಲಿರುವ ವ್ಯಕ್ತಿಗಳು ತಮ್ಮ ಕೈ ಕೆಳಗಿನ ಸಿಬ್ಬಂದಿಯನ್ನು ಸಮಾನವಾಗಿ ನೋಡುವುದು ತುಂಬಾನೇ ಕಡಿಮೆ. ಆದರೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ತಮ್ಮದೇ ಆದ ಹೆಸರು ಗಳಿಸಿರುವ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಈ ಮಾತಿಗೆ ಭಿನ್ನವಾಗಿ ನಿಲ್ತಾರೆ ಅನ್ನೋದಕ್ಕೆ ಅವರು ಮಾಡಿರುವ ಟ್ವೀಟ್​ವೊಂದು ಸಾಕ್ಷಿಯಾಗಿದೆ.

ಹೋಮ್‌ ಗಾರ್ಡ್‌ಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿರುವ ಸಿಂಗಂ, ಲೋಕಸಭಾ ಚುನಾವಣೆ ಮತ್ತು ಯಾವುದೇ ಚುನಾವಣೆ ಬಂದ್ರೆ ಅದರ ಹೀರೋಗಳೆಂದರೆ ನಮ್ಮ ಹೋಮ್‌ ಗಾರ್ಡ್‌ಗಳು ಅಂತಾ ಟ್ವಿಟ್ಟರ್​ನಲ್ಲಿ ಪೋಸ್ಟ್​ವೊಂದನ್ನ ಹಾಕಿದ್ದಾರೆ. 

For me, the heroes of this election and for every election that I have worked will be our home guards. The tireless warriors in this small group are carpenters, coolie workers, drivers etc. They double up as home guards whenever the job calls them. pic.twitter.com/coDzFBe8Bj

— K. Annamalai IPS (@DCPSouthBCP)

Tap to resize

Latest Videos

ಶ್ರಮವರಿಯದ ಯುದ್ಧ ವೀರರೆಂದರೆ ಕಾರ್ಪೆಂಟರ್ಸ್‌, ಕೂಲಿ ಕಾರ್ಮಿಕರು, ಡ್ರೈವರ್ಸ್‌, ಇತ್ಯಾದಿ. ಆದ್ರೆ ಅವರೆಲ್ಲರಿಗಿಂತ ಮಿಗಿಲಾದ ಕೆಲಸವೆಂದರೆ ಹೋಮ್‌ಗಾರ್ಡ್ ಕೆಲಸ ಅವರಿಗೆ ಗೌರವವನ್ನು ನೀಡಲೇಬೇಕು ಅಂತಾ ಅಭಿಪ್ರಾಯ ಪಟ್ಟಿರುವ ಅಣ್ಣಾಮಲೈ, ಚುನಾವಣೆಯಲ್ಲಿ ಶ್ರಮಿಸಿದ ಹೋಮ್​ಗಾರ್ಡ್ಸ್​​ನೊಂದಿಗೆ ಸೆಲ್ಫಿಗೆ ಪೋಸ್​ ಕೊಟ್ಟಿರುವುದು, ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

click me!