ಧಾರೆ ಮಂಟಪಕ್ಕೆ ಹೋಗುವ ಮುನ್ನ ವೋಟ್ ಹಾಕಿದ ವಧುಗಳು!

Published : Apr 18, 2019, 09:35 AM ISTUpdated : Apr 18, 2019, 09:36 AM IST
ಧಾರೆ ಮಂಟಪಕ್ಕೆ ಹೋಗುವ ಮುನ್ನ ವೋಟ್ ಹಾಕಿದ ವಧುಗಳು!

ಸಾರಾಂಶ

ಧಾರೆ ಮಂಟಪಕ್ಕೆ ತೆರಳುವ ಮೊದಲು ವಧುಗಳು ಮತಗಟ್ಟೆಗೆ ಬಂದು ಮತ ಚಲಾಯಿಸಿ ಗಮನ ಸೆಳೆದರು. ಮಾಂಗಲ್ಯ ಭಾಗ್ಯಕ್ಕೂ ಮುನ್ನ ಮತದಾನ ಭಾಗ್ಯ ಮಾಡಿದ್ದಾರೆ. 

ಬೆಂಗಳೂರು (ಏ. 18): ಧಾರೆ ಮಂಟಪಕ್ಕೆ ತೆರಳುವ ಮೊದಲು ಏನೆಕಲ್ಲಿನ ನವ ವಧು ಮತ ಚಲಾಯಿಸಿ ಗಮನ ಸೆಳೆದಿದ್ದಾರೆ. ಇಂದು ಏನೆಕಲ್ಲಿನ ನವ ವಧು ಅಶ್ವಿನಿ ಹಸೆಮಣೆ ಏರಲಿದ್ದಾರೆ. ಧಾರಾ ಮಂಟಪಕ್ಕೆ ತೆರಳುವ ಮೊದಲು ಮತದಾನ ಕೇಂದ್ರಕ್ಕೆ ಹೋಗಿ ಮತ ಚಲಾಯಿಸಿದರು.

ಏನೆಕಲ್ಲಿನ ಜನಾರ್ದನ ಮತ್ತು ತೀರ್ಥಮ್ಮ  ದಂಪತಿಯ ಪುತ್ರಿ ಅಶ್ವಿನಿಯವರ ವಿವಾಹವು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನೆರವೇರಲಿದ್ದು, ಬೆಳಿಗ್ಗೆಯೇ ಮನೆಯವರೊಂದಿಗೆ ಬಾನಡ್ಕ ಬೂತ್ ಗೆ ಬಂದ ಅವರು ಮತ ಚಲಾಯಿಸಿದರು.

ಉಡುಪಿಯ ಕಾವೂರು ಪಳನೀರಿನ ನಾರಾಯಣ ಕುಲಾಲ್ ರವರ ಪುತ್ರಿ ಮದುಮಗಳು ಕಾರ್ತಿಕಾ ಗಾಂಧಿನಗರ ಕಾಲೇಜಿನ ಮತಗಟ್ಟೆಗೆ ಬಂದು ಮತದಾನ ಮಾಡಿದರು. 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!