ಬಿಡುಗಡೆಗೂ ಮುನ್ನವೇ ರಫೆಲ್ ಪುಸ್ತಕ ವಶಕ್ಕೆ ಪಡೆದ ಚುನಾವಣಾ ಆಯೋಗ!

By Web DeskFirst Published Apr 3, 2019, 1:34 PM IST
Highlights

ರಫೆಲ್ ಕುರಿತಾದ ಪುಸ್ತಕ ವಶಕ್ಕೆ ಪಡೆದ ಚುನಾವಣಾ ಆಯೋಗ| ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ| ಎಸ್. ವಿಜಯನ್ ಬರೆದಿರುವ Rafale: The Scam That Shook the Nation" ಎಂಬ ಪುಸ್ತಕ| ಬಿಡುಗಡೆಗೂ ಮುನ್ನವೇ 150 ಪ್ರತಿಗಳನ್ನು ವಶಕ್ಕೆ ಪಡೆದ ಚುನಾವಣಾ ಆಯೋಗ|

ಚೆನ್ನೈ(ಏ.03): ಮಹತ್ವದ ಬೆಳವಣಿಗೆಯೊಂದರಲ್ಲಿ ರಫೆಲ್ ಕುರಿತಾದ ಪುಸ್ತಕವೊಂದನ್ನು ಬಿಡುಗಡೆಗೂ ಮುನ್ನವೇ ಚುನಾವಣಾ ಆಯೋಗ ವಶಕ್ಕೆ ಪಡೆದಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

"Rafale: The Scam That Shook the Nation" ಎಂಬ ಪುಸ್ತಕವನ್ನು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಬಿಡುಗಡೆಗೂ ಮುನ್ನವೇ ವಶಕ್ಕೆ ಪಡೆಯಲಾಗಿದೆ.

ಚೆನ್ನೈ ಮೂಲದ ಇಂಜಿನಿಯರ್ ಎಸ್. ವಿಜಯನ್ ಬರೆದಿರುವ "Rafale: The Scam That Shook the Nation" ಪುಸ್ತಕದ ಸುಮಾರು 150 ಪ್ರತಿಗಳನ್ನು ವಶಕ್ಕೆ ಪಡೆಯಲಾಗಿದ್ದು, ನಗರದ ಪುಸ್ತಕ ಮಳಿಗೆಯಲ್ಲಿ ಇಡಲಾಗಿದ್ದ ಎಲ್ಲಾ ಪುಸ್ತಕಗಳನ್ನು ವಾಪಸ್ಸು ಪಡೆಯಲಾಗಿದೆ. ನಂತರ ಅವುಗಳನ್ನು ಲೇಖಕರಿಗೆ ವಾಪಸ್ಸು ನೀಡಲಾಗಿದೆ.

ರಫೆಲ್ ಹಗರಣದ ಕುರಿತು "ದಿ ಹಿಂದೂ' ಪತ್ರಿಕೆಯಲ್ಲಿ ಸರಣಿ ಲೇಖನ ಬರೆದಿದ್ದ ಪತ್ರಿಕೆಯ ಸಂಪಾದಕ ಎನ್. ರಾಮ್, "Rafale: The Scam That Shook the Nation" ಪುಸ್ತಕವನ್ನು ಬಿಡುಗಡೆಗೊಳಿಸಿದ್ದಾರೆ.

click me!