ಕನ್ಹಯ್ಯಾ ಬಳಿಕ ಈ ಅಭ್ಯರ್ಥಿ ಪರ ನಟಿ ಸ್ವರಾ ಭಾಸ್ಕರ್ ಪ್ರಚಾರ!

By Web DeskFirst Published May 9, 2019, 1:11 PM IST
Highlights

ಬೆಗುಸುರೈ ಅಭ್ಯರ್ಥಿ ಕನ್ಹಯ್ಯಾ ಪರ ಪ್ರಚಾರ ನಡೆಸಿದ್ದ ನಟಿ ಸ್ವರಾ ಭಾಸ್ಕರ್| ಈಗ ಮತ್ತೊಬ್ಬ ಅಭ್ಯರ್ಥಿ ಪರ ಮತಯಾಚನೆ|

ನವದೆಹಲಿ[ಮೇ.09]: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಸೋಷಿಯಲ್ ಮೀಡಿಯಾದಲ್ಲಿ ಅದೆಷ್ಟು ಸಕ್ರಿಯರಾಗಿದ್ದಾರೋ, ಅಷ್ಟೇ ರಾಜಕೀಯದಲ್ಲೂ ತಮ್ಮನ್ನು ತವು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಬಿಹಾರದ ಬೆಗುಸುರೈ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಪರ ಪ್ರಚಾರ ನಡೆಸಿದ್ದ ಈ ಬೆಡಗಿ ಬಳಿಕ ದೆಹಲಿಯ ಆಪ್ ಅಭ್ಯರ್ಥಿ ಆತಿಶ್ ಮರ್ಲೇನಾ ಪರವಾಗಿಯೂ ಮತ ಯಾಚಿಸಿದ್ದರು. ಇದೀಗ ಮತ್ತೊಬ್ಬ ಅಭ್ಯರ್ಥಿಯ ಪರ ತಾನು ಪ್ರಚಾರ ನಡೆಸುವುದಾಗಿ  ಸಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

On Thursday, May 9th, I will be back in Delhi to campaign for , South Delhi constituency. Educated, aware and progressive youngsters like Raghav need all our support to be in Parliament. pic.twitter.com/8lsL14nMTe

— Swara Bhasker (@ReallySwara)

⁦We need voices like that of ⁩ in the Indian Parliament! Her work with transforming the Govt. schools in is exemplary. Delighted to have participated in her campaign. Wish you all the best Atishi! 🙌🏾🙌🏾🙌🏾🙏🏿 ⁦⁩ ⁦⁩ pic.twitter.com/c7IixwQkn0

— Swara Bhasker (@ReallySwara)

ಈ ಕುರಿತಾಗಿ ಟ್ವೀಟ್ ಮಾಡಿರುವ ಸ್ವರಾ ಭಾಸ್ಕರ್ 'ಮೇ 9ರಂದು ಗುರುವಾರ ನಾನು ದಕ್ಷಿಣ ದೆಹಲಿಗೆ ಮರಳುತ್ತೇನೆ. ಇಲ್ಲಿ ದಕ್ಷಿಣ ದೆಹಲಿಯ ಅಭ್ಯರ್ಥಿ ರಾಘವ್ ಚಡ್ಢಾ ಪರ ಪ್ರಚಾರ ನಡೆಸುತ್ತೇನೆ. ಶಿಕ್ಷಣ ಪಡೆದಿರುವ, ಜಾಗೃತ ಹಾಗು ಅಭಿವೃದ್ಧಿಪಡಿಸುವ ಯೋಚನೆಯುಳ್ಳ ಯುವ ನಾಯಕ ರಾಘವ್ ರಂತವರು ಸಂಸತ್ತು ಪ್ರವೇಶಿಸಲು ನಮ್ಮ ಸಹಕಾರದ ಅಗತ್ಯವಿದೆ' ಎಂದಿದ್ದಾರೆ.

ಹುಟ್ಟುಹಬ್ಬ ಬಿಟ್ಟು ಕನ್ಹಯ್ಯಾ ಪರ ಪ್ರಚಾರಕ್ಕೆ ಬಂದ ಬಾಲಿವುಡ್ ಖ್ಯಾತ ನಟಿ!

click me!